ಗೋಕಾಕದ ಎನ್‌ಎಸ್‌ಎಫ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಬಾಲಚಂದ್ರ ಜಾರಕಿಹೊಳಿ, ಮಹಾದೇವ ಶೆಕ್ಕಿ, ಸಿದ್ದಲಿಂಗಪ್ಪ ಕಂಬಳಿ ಇತರರಿದ್ದರು.
ಇಲ್ಲಿಯ ಎನ್‌ಎಸ್‌ಎಫ ಕಾರ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ರಚಿಸಿ, ಮೂಲಭೂತ ಹಕ್ಕು ಪಡೆಯಲು ಭದ್ರ ಬುನಾದಿ ಹಾಕಿದ್ದಾರೆ. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ದಲಿತ ಸಮುದಾಯದವರಿಗಷ್ಟೇ ಸೀಮಿತವಾಗದೇ ಎಲ್ಲ ವರ್ಗಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಅರಬಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಪ್ರಭಾ ಶುಗರ್ಸ್ ಅಧ್ಯಕ್ಷ ಸಿದ್ಧಲಿಂಗಪ್ಪ ಕಂಬಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಂಜಯ ಹೊಸಮನಿ, ತಾಪಂ ಮಾಜಿ ಸದಸ್ಯರಾದ ನಾಗಪ್ಪ ಮಂಗಿ, ಸುಭಾಸ ಕಮತಿ, ವಿಠ್ಠಲ ಆಡಿನ, ಸಿದ್ದು ಕಂಕಣವಾಡಿ ಇತರರಿದ್ದರು.