ಯಮಕನಮರಡಿಯ ಎಸ್‌ಆರ್‌ಎಂ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗಣಕಯಂತ್ರ ಪ್ರಯೋಗಾಲಯವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಈರಣ್ಣ ಬಿಸಿರೊಟ್ಟಿ ಇತರರಿದ್ದರು
ಉಳ್ಳಾಗಡ್ಡಿ-ಖಾನಾಪುರ: ಯಮಕನಮರಡಿ ವ್ಯಾಪ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಕೊಠಡಿಗಳನ್ನು ನಿರ್ಮಿಸಿ ಮಕ್ಕಳ ಅಧ್ಯಯನದ ಹಿತದೃಷ್ಟಿಯಿಂದ ವಿವಿಧ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮೀಪದ ಯಮಕನಮರಡಿಯ ಎಸ್‌ಆರ್‌ಎಂ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿಗೆ ಅಗತ್ಯವಿರುವ ಸುಭದ್ರ ಕಟ್ಟಡ,
ಸಿಸಿಟಿವಿ ಕ್ಯಾಮರಾ, ಸಿಬ್ಬಂದಿಯನ್ನು ಶೀಘ್ರ ಒದಗಿಸಲಾಗುವುದು.
ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಪ್ರಾರಂಭಿಸುವ
ನಿಟ್ಟಿನಲ್ಲಿ ಪರಿಶೀಲಿಸಲಾಗುವುದು. ಜತೆಗೆ ಕಾಲೇಜಿಗೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು ಎಂದರು.
ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಈರಣ್ಣ ಬಿಸಿರೊಟ್ಟಿ, ಕಿರಣಸಿಂಗ ರಜಪೂತ, ರವೀಂದ್ರ ಜಿಂಡ್ರಾಳಿ, ಸಿದ್ದಪ್ಪ ಶಿಳ್ಳಿ, ರಾಜು ಮಾರ‌್ಯಾಳಿ, ಅಸ್ಲ್‌ಂ ಪಕಾಲಿ,
ಶಾಂತಕುಮಾರ ಹಾಲದೇವರಮಠ, ಶರೀಫ್ ಬೇಪಾರಿ, ಶೌಕತ್ ಖಾಜಿ, ಶಶಿಕಾಂತ ಹಟ್ಟಿ, ಪ್ರಾಚಾರ್ಯ ಎಸ್.ಎ.ರಾಮನಕಟ್ಟಿ, ಎ.ಎ.ಕಿವಂಡಾ, ಎಸ್.ಆರ್.ತಬರಿ, ಬಿ.ಬಿ.ಕೊಡ್ಲಿ ಇತರರಿದ್ದರು.