ಕೆ.ಜುನಿಪೇಠ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಠಾಚಾರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನಾಕಾರರು ತಾಪಂ ಇಒ ಬಸವರಾಜ ಐನಾಪುರಗೆ ಮನವಿ ಸಲ್ಲಿಸಿದರು. 
ಬೆಳಗಾವಿ

ಜುನಿಪೇಠ ಗ್ರಾಪಂನಲ್ಲಿ ಅವ್ಯವಹಾರ ಆರೋಪ

ರಾಮದುರ್ಗ: ತಾಲೂಕಿನ ಕೆ.ಜುನಿಪೇಠ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ಪದಾಧಿಕಾರಿಗಳು ಗ್ರಾಪಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿಯಲ್ಲಿ ವಿವಿಧ ದಾಖಲೆಗಳ ತಿದ್ದುಪಡಿ ಸೇರಿ ನಿರಂತರ ಭ್ರಷ್ಟಾಚಾರ ನಡೆಯುತ್ತಿದೆ. ಪಂಚಾಯಿತಿಯಲ್ಲಿನ ಅವ್ಯವಹಾರ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್‌ಎಂಆರ್ ಹಾಕಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಪಂನಲ್ಲಿ ದಲಿತರ ಆಸ್ತಿ ಸೇರಿ ವಿವಿಧ ಆಸ್ತಿ ದಾಖಲೆ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿ ಪ್ರಶ್ನಿಸಿ ಅನೇಕರು ತಾಪಂ ಮೊರೆ ಹೋಗಿದ್ದಾರೆ. ಈವರೆಗೆ ನೋಂದವರಿಗೆ ನ್ಯಾಯ ಸಿಕ್ಕಿಲ್ಲ. ಕೂಡಲೇ ಗ್ರಾಪಂನ ಭಷ್ಟಾಚಾರ ತಡೆೆಗಟ್ಟಬೇಕೆಂದು ಆಗ್ರಹಿಸಿದರು.
\
ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒ ಬಸವರಾಜ ಐನಾಪುರ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಆರೋಪ ಹಾಗೂ ಬೇಡಿಕೆ ಪರಿಶೀಲಿಸುತ್ತೇನೆ. ಲೋಪ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ರಾಜಕುಮಾರ ಚಲವಾದಿ, ಲಕ್ಷ್ಮೀ ನಾಗನ್ನವರ, ಕೃಷ್ಣಾ ಸಾಲಿಮನಿ, ದುರಗಪ್ಪ ಮೇಲಿನಮನಿ ಇತರರಿದ್ದರು.