ಬೆಳಗಾವಿ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ಏರ್ಪಡಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಬಾರ್ ಅಸೋಶಿಯೇಶನ್ಗೆ ಆಯ್ಕೆಯಾದವರನ್ನು ಗೌರವಿಸಲಾಯಿತು. ಡಾ.ಅಲ್ಲಮಪ್ರಭು ಸ್ವಾಮೀಜಿ, ಎಸ್.ಜಿ.ಸಿದ್ನಾಳ, ಮುರಿಗೆಪ್ಪ ಬಾಳಿ, ಎ್.ಆರ್.ಪಾಟೀಲ, ಈರಣ್ಣ ಚಿನಗುಡಿ ಇತರರಿದ್ದರು.
ಬೆಳಗಾವಿ: ಇಡೀ ಜಗತ್ತಿನ ತನು&ಮನ ಗೆದ್ದ ವೀರ ಮಹಿಳೆ, ಸ್ತ್ರೀಕುಲದ ತಿಲಕ, ಮನುಕುಲದ ಮಾಣಿಕ್ಯ ವೈರಾಗ್ಯ ಶಿವಧ್ಯಾನ ಶಿವಶರಣೆ ಎಂದು ಖ್ಯಾತಿ ಪಡೆದವರು ಅಕ್ಕಮಹಾದೇವಿ ಎಂದು ಡಾ.ಗೀತಾ ದೇಯಣ್ಣವರ ಹೇಳಿದರು.
ಇಲ್ಲಿನ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ಈಚೆಗೆ ಏರ್ಪಡಿಸಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಮಹಾ ಶರಣೆ ಅಕ್ಕಮಹಾದೇವಿ ವಿಷಯ ಕುರಿತು ಉಪನ್ಯಾಸ ನೀಡಿದರು.
ದಿವ್ಯಸಾನ್ನಿಧ್ಯ ವಹಿಸಿದ್ದ ನಾಗನೂರ ರುದ್ರಾ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ ವ್ಯಕ್ತಿತ್ವ ವಿಭಿನ್ನವಾಗಿತ್ತು ಎಂದರು.
ಅಧ್ಯತೆ ವಹಿಸಿದ್ದ ಬಸವರಾಜ ರೊಟ್ಟಿ ಮಾತನಾಡಿ, ಬಸವತತ್ತ$$$್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕು ಹಾಗೂ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಗಬೇಕು ಎಂಬ ಉದ್ದೇಶಗಳೊಂದಿಗೆ ಜಾಗತಿಕ ಲಿಂಗಾಯತ ಮಹಾಸಭಾ ಪ್ರಯತ್ನಿಸುತ್ತಿದೆ ಎಂದರು.
ಬಾರ್ ಅಸೋಶಿಯೇಶನ್ಗೆ ಆಯ್ಕೆ ಆದ ಹತ್ತು ಜನ ಸಮುದಾಯದ ವಕೀಲರನ್ನು ಮಹಾಸಭಾದಿಂದ ಗೌರವಿಸಲಾಯಿತು. ವಚನ ಪಿತಾಮಹ ಡಾ..ಗು.ಹಳಕಟ್ಟಿ ಜಯಂತಿ ನಿಮಿತ್ತ ಮೇ 28ರಂದು ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ವಚನ ಕಂಠ ಪಾಠ ಸ್ಪರ್ಧೆಯ ಕರ ಪತ್ರ ಬಿಡುಗಡೆಗೊಳಿಸಲಾಯಿತು.
ಎಸ್.ಜಿ ಸಿದ್ನಾಳ, ಮುರಿಗೆಪ್ಪ ಬಾಳಿ, ಕೆಂಪಣ್ಣ ರಾಮಾಪುರಿ, ಎ್.ಆರ್.ಪಾಟೀಲ, ಈರಣ್ಣ ಚಿನಗುಡಿ, ಸುರೇಶ ನರಗುಂದ, ಅಡಿವೆಪ್ಪ ಇಟಗಿ, ಪ್ರವಿಣಕುಮಾರ ಚಿಕಲಿ, ಬಸವರಾಜ ಸುಲ್ತಾನಪುರಿ, ರತ್ನಾ ಬೆಣಚನಮರಡಿ, ಶೋಭಾ ಶಿವಳ್ಳಿ, ಅನುಷಾ ಬಶೆಟ್ಟಿ, ಭಾಗ್ಯಶ್ರೀ ಬೆಣಚನಮರಡಿ ಇತರರಿದ್ದರು.