ಸೋಮವಾರ ಭಂಡಾರ ಒಡೆಯುವುದರ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಅಜ್ಜನಕಟ್ಟಿ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ನಿರ್ಮಿಸಿದ ಚಾಂದನಿ ನಿರ್ಮಾಣದ ಕಟ್ಟಡವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ ಇತರರಿದ್ದರು.
ಮಮದಾಪುರ: ಸಮೀಪದ ಅಜ್ಜನಕಟ್ಟಿ ಗ್ರಾಮದ ರೇವಣಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಮೂರು ದಿನಗಳವರೆಗೆ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ ರೇವಣಸಿದ್ಧೇಶ್ವರ ದೇವರ ಗದ್ದುಗೆಗೆ ರುದ್ರಾಭಿಷೇಕ, ಹೋಮ-ಹವನ ನೆರವೇರಿತು. ಬಳಿಕ 8ಗಂಟೆಗೆ ರಂಗಸಿದ್ಧೇಶ್ವರ ಮಂದಿರದಿಂದ ರೇವಣಸಿದ್ಧೇಶ್ವರ ಮಂದಿರದವರೆಗೆ ಕುಂಭ ಕಲಶ ಮೆರವಣಿಗೆ ನೂರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ಸಂಭ್ರಮದಿಂದ ಜರುಗಿತು. ಬೆಳಗ್ಗೆ 11ಕ್ಕೆ ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹಾಗೂ ಮಮದಾಪುರದ ಚರಮೂರ್ತೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಜರುಗಿತು. ಸಂಜೆ ಸುತ್ತಮುತ್ತಲಿನ ಗ್ರಾಮಗಳ ದೇವರ ಪಲ್ಲಕ್ಕಿ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು.
ಭಾನುವಾರ ಬೆಳಗ್ಗೆ 10 ಗಂಟೆಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಮುಖಂಡರಾದ ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಸಿದ್ದಪ್ಪ ಪಾಟೀಲ, ಬೀರಪ್ಪ ನಡಟ್ಟಿ, ರಾಮಚಂದ್ರ ಪಾಟೀಲ, ಪರಗೌಡ ಪಾಟೀಲ, ಮಾರುತಿ ಸುಣಧೋಳಿ, ಮುತ್ತಪ್ಪ ರಕ್ಷಿ, ಶಿವಲಿಂಗ ಜಕ್ಕಣ್ಣವರ, ಗದಿಗೆಪ್ಪ ನಡಟ್ಟಿ ಇತರರಿದ್ದರು.