ಬೆಳಗಾವಿಯಲ್ಲಿ ಭಾನುವಾರ ಜರುಗಿದ ಅನುದಾನಿತ ಶಾಲೆ-ಕಾಲೇಜುಗಳ ನೌಕರರ ಸಂಘದ ಸಭೆಯಲ್ಲಿ ರಾಮು ಗುಗವಾಡ, ಎಸ್.ಎಂ.ಪಾಟೀಲ, ಎಸ್.ಎಸ್.ಬಳಿಗಾರ, ಡಿ.ಬಿ.ಪಾಟೀಲ, ಎಸ್.ಡಿ.ಪಾಟೀಲ ಬಸವರಾಜ ಹಳಿಂಗಳಿ ಇದ್ದರು.
ಬೆಳಗಾವಿ: ಅನುದಾನಿತ ಶಾಲೆ-ಕಾಲೇಜು ನೌಕರರಿಗೆ ಆರೋಗ್ಯ ಸಂಜಿವಿನಿ, ಪಿಂಚಣಿ ಸೇರಿ ವಿವಿಧ ಸೌಲಭ್ಯ ಒದಗಿಸುವುದು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ರೂಪಿಸಲು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಅನುದಾನಿತ ಶಾಲೆ-ಕಾಲೇಜು ನೌಕರರ ಸಂಘದ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಣಯಿಸಲಾಯಿತು.
ಮುಂಬರುವ ರಾಜ್ಯದ ಬಜೆಟ್‌ನಲ್ಲಿ ಆರೋಗ್ಯ ಸಂಜೀವಿನಿ ಮತ್ತು ನಿಶ್ಚಿತ ಪಿಂಚಣಿ ಯೋಜನೆ ಜಾರಿಯಾಗಬೇಕು. ಖಾಲಿ ಹುದ್ದೆ ತುಂಬಲು ಅನುಮತಿ ನೀಡಬೇಕು. ಸರ್ಕಾರಿ ಮತ್ತು ಅನುದಾನಿತ ನೌಕರರ ಮಧ್ಯೆ ಇರುವ ತಾರತಮ್ಯ ಹೋಗಲಾಡಿಸಬೇಕು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯಾದ್ಯಂತ ಹೋರಾಟ ರೂಪಿಸಲು ನಿರ್ಧರಿಸಲಾಯಿತು.
ರಾಜ್ಯ ಕಾರ್ಯಾಧ್ಯಕ್ಷ ರಾಮು ಗುಗವಾಡ, ಎಸ್.ಎಂ.ಪಾಟೀಲ, ಎಸ್.ಎಸ್.ಬಳಿಗಾರ, ಡಿ.ಬಿ.ಪಾಟೀಲ, ಎಸ್.ಡಿ.ಪಾಟೀಲ, ಜಿಲ್ಲಾ ಅಧಕ್ಷ ಬಸವರಾಜ ಹಳಿಂಗಳಿ, ಉಪಾಧ್ಯಕ್ಷ ಸರ್ರಾಜ್ ಮಾಮೂಲ್ಲದಾರ, ಗೌರವಾಧ್ಯಕ್ಷ ಮುತ್ತುರಾಜ ಮತ್ತಿಕೊಪ್ಪ, ಉಪಾಧ್ಯಕ್ಷರಾದ ಗೌಡಪ್ಪ ಪರ್ವತಗೌಡ, ತಿಮ್ಮಪ್ಪಗೋಳ, ಕಾರ್ಯದರ್ಶಿ ಎಸ್.ಐ.ಕಳಸಣ್ಣವರ, ಸಹ ಕಾರ್ಯದರ್ಶಿಗಳಾದ ಬಿ.ಎಸ್.ಕರಲಿಂಗನವರ, ರಾಜು ಪಾಟೀಲ, ಖಜಾಂಚಿ ಗಣೇಶ ಮಾಸ್ತಮರಡಿ, ಸಂಘಟನಾ ಕಾರ್ಯದರ್ಶಿ ಗಳಾದ ಟಿ.ಪಿ.ದಾಸರ, ಶಾರದಾ ಜೋಶಿ, ಎಲ್.ಎಸ್.ಹೊನ್ನಪ್ಪಗೋಳ ಇತರರಿದ್ದರು.