ದೆಹಲಿಯಲ್ಲಿ ತಮ್ಮ ಪ್ರಾಜೆಕ್ಟ್ ಪ್ರದರ್ಶಿಸಿದ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಲೀಲಾವತಿ ವೆಂಕಟೇಶ ಕರಗುಪ್ಪಿಕರ ಪ್ರೌಢಶಾಲೆಯ ಲಕ್ಷ್ಮೀ ಹಿರೇಮಠ, ಅರ್ಚನಾ ಪಾಟೀಲ, ಮೀನಾ ದಳವಾಯಿ.
ಬೆಳಗಾವಿ : ಜಿಲ್ಲೆಯ ಮೂವರು ವಿದ್ಯಾರ್ಥಿನಿಯರು ರೈತರಿಗೆ ಉಪಯೋಗವಾಗಬಲ್ಲ ಎಐ ಆಧಾರಿತ ಕೃಷಿ ಬೆಳೆಗಳ ಬೆಲೆ ಮುನ್ಸೂಚನಾ ಪ್ರಾಜೆಕ್ಟ್ (ಎಐ ಕ್ರಾಪ್ ಪ್ರೈಜ್ ಫೋರ್‌ಕಾಸ್ಟಿಂಗ್ ಟೂಲ್) ಸಿದ್ಧಪಡಿಸಿದ್ದು, ದೇಶದ ಗಮನ ಸೆಳೆಯುತ್ತಿದೆ.
ತಾಲೂಕಿನ ಅಗಸಗಿ ಗ್ರಾಮದ ಲೀಲಾವತಿ ವೆಂಕಟೇಶ ಕರಗುಪ್ಪಿಕರ ಪ್ರೌಢಶಾಲೆಯ 9ನೇ ತರಗತಿಯ ಲಕ್ಷ್ಮೀ ಈರಯ್ಯ ಹಿರೇಮಠ, ಅರ್ಚನಾ ಕಲಗೌಡ ಪಾಟೀಲ ಹಾಗೂ ಮೀನಾ ಹನುಮಂತ ದಳವಾಯಿ ಸಿದಟಛಿಪಡಿಸಿದ ಈ ಪ್ರಾಜೆಕ್ಟ್ ಈಚೆಗೆ ದೆಹಲಿಯಲ್ಲಿ ನಡೆದ ಎಐ ್ಯೂಚರ್ ಸ್ಕಿಲ್ಸ್ ಹ್ಯಾಕಥಾನ್-2026ರಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದೆ.
ಕೃಷಿ ಕುಟುಂಬದವರಾದ ವಿದ್ಯಾರ್ಥಿನಿಯರು ಅಪ್ಪಂದಿರು ಪಡುವ ಕಷ್ಟಕ್ಕೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ವಿನೂತನ ಪ್ರಯೋಗ ಮಾಡಿದ್ದಾರೆ. ಲರ್ನಿಂಗ್ ಲಿಂಕ್ ಫೌಂಡೇಷನ್ ಮತ್ತು ಡೆಲ್ ಟೆಕ್ನಾಲಾಜಿ, ನೀತಿ ಆಯೋಗದ ಅಟಲ್ ಇನ್ನೋವೇಶನ್ ದೆಹಲಿಯಲ್ಲಿ ತಮ್ಮ ಪ್ರಾಜೆಕ್ಟ್ ಪ್ರದರ್ಶಿಸಿದ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಲೀಲಾವತಿ ವೆಂಕಟೇಶ ಕರಗುಪ್ಪಿಕರ ಪ್ರೌಢಶಾಲೆಯ ಲಕ್ಷ್ಮೀ ಹಿರೇಮಠ, ಅರ್ಚನಾ ಪಾಟೀಲ, ಮೀನಾ ದಳವಾಯಿ. ಮಿಷನ್ ಸಹಯೋಗದೊಂದಿಗೆ ದೇಶದ ವಿವಿಧೆಡೆ ವಿದ್ಯಾರ್ಥಿಗಳು ತಯಾರಿಸಿದ್ದ ಒಟ್ಟು ಆರು ಸಾವಿರ ಪ್ರಾಜೆಕ್ಟ್‌ಗಳನ್ನು ಆಹ್ವಾನಿಸಲಾಗಿತ್ತು. ಆನ್ ಲೈನ್‌ನಲ್ಲಿ ಎಐ ಕುರಿತು ಬೂಟ್ ಕ್ಯಾಂಪ್ ಏರ್ಪಡಿಸಿ, ಅಂತಿಮವಾಗಿ 10 ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿ ಪ್ರದರ್ಶನಕ್ಕಾಗಿ ದೆಹಲಿಗೆ ಕರೆಯಿಸಿಕೊಂಡಿದ್ದರು. ಇದರಲ್ಲಿ ಈ ವಿದ್ಯಾರ್ಥಿನಿಯರು ತಮ್ಮ ಯೋಜನೆ ಪ್ರಸ್ತುತಪಡಿಸಿ, ಉದ್ಯಮಿಗಳ ಗಮನ ಸೆಳೆದಿದ್ದಾರೆ.
ಮಾರ್ಗದರ್ಶಕ ಸಿದ್ದಗೌಡ ಪಾಟೀಲ ಸಲಹೆಯಂತೆ ವೆಬ್ ಪೋರ್ಟಲ್ ಸಿದಟಛಿಪಡಿಸಿರುವ ವಿದ್ಯಾರ್ಥಿನಿಯರು, ಮುಂದಿನ ದಿನಗಳಲ್ಲಿ ಒಂದು ಮೊಬೈಲ್ ಆ್ಯಪ್ ಸಿದಟಛಿಪಡಿಸಿ, ಆ ಮೂಲಕ ಮುಂದಿನ ಆರು ತಿಂಗಳಲ್ಲಿ ವಿವಿಧ ಬೆಳೆಗಳ ಬೆಲೆಯ ಸಂಪೂರ್ಣ ಮಾಹಿತಿ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದ್ದಾರೆ. ಇದು ಸಾಧ್ಯವಾದಲ್ಲಿ ರೈತರಿಗೆ ಬಹೂಪಯೋಗಿ ಆಗಲಿದೆ. ಇದರಲ್ಲಿ ಬೆಲೆಗಳ ನಿಖರತೆ ಶೇ.85ರಿಂದ 90ರಷ್ಟು ಸ್ಪಷ್ಟವಾಗಲಿದೆ ಎಂಬುದು ಮಾರ್ಗದರ್ಶಕ ಸಿದ್ದಗೌಡರ ಅಭಿಪ್ರಾಯ.
ಈ ಪ್ರಾಜೆಕ್ಟ್‌ನಲ್ಲಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಐದು ವರ್ಷಗಳ ಅಂಕಿ ಅಂಶಗಳನ್ನು ವಿಶ್ಲೇಷಣೆ ಮಾಡಲಾಗಿದ್ದು, ಮುಂದಿನ ಆರು ತಿಂಗಳವರೆಗೆ ಬೆಲೆ ಎಷ್ಟಿರುತ್ತದೆ ಎಂಬ ಮಾಹಿತಿಯನ್ನು ಪೋರ್ಟಲ್ನಲ್ಲಿ ಸೇರಿಸಲಾಗಿದೆ. ಪ್ರಾಯೋಗಿಕವಾಗಿ ಟೊಮ್ಯಾಟೊ ಆಯ್ಕೆ ಮಾಡಿಕೊಂಡಿದ್ದು, ನವೆಂಬರ್ ತಿಂಗಳಲ್ಲಿ ಒಳ್ಳೆಯ ದರ ಸಿಗಲಿದೆ ಎಂದು ತೋರಿಸುತ್ತಿದೆ. ಹೀಗೆ, ಇಡೀ ರಾಜ್ಯ ಮತ್ತು ದೇಶಕ್ಕೆ ಅನ್ವಯವಾಗುವಂತೆ ಎಲ್ಲ ಬೆಳೆಗಳ ಬೆಲೆಯ ಕುರಿತು ತಮ್ಮ ಆ್ಯಪ್‌ನಲ್ಲಿ ರೈತರಿಗೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ.
ಮುಂದಿನ ಆರು ತಿಂಗಳಲ್ಲಿ ಯಾವ ಉತ್ಪನ್ನಕ್ಕೆ ಬೆಲೆ ಸಿಗುತ್ತದೆ ಎಂದು ನೋಡಿಕೊಂಡು ರೈತರು ಬೆಳೆ ಬೆಳೆಯಬಹುದಾಗಿದೆ. ಮುಂದೆ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, 8 ರಾಜ್ಯಗಳ ವಿವಿಧ ಬೆಳೆಗಳ ಬೆಲೆ ಎಷ್ಟಿರುತ್ತದೆ ಎಂಬ ಮಾಹಿತಿ ಆಯಾ ಪ್ರಾದೇಶಿಕ ಭಾಷೆಯಲ್ಲೇ ತಿಳಿಯುವಂತೆ ಮಾಡಲಿದ್ದಾರೆ.