ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಜರುಗಲಿರುವ ಕೃಷಿ ಉತ್ಸವದ ಅಂಗವಾಗಿ ಗಣ್ಯರು ಕರಪತ್ರ ಬಿಡುಗಡೆಗೊಳಿಸಿದರು. ಬಸವಪ್ರಸಾದ ಜೊಲ್ಲೆ, ಮಲಗೊಂಡಾ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಪವನಕುಮಾರ ಪಾಟೀಲ ಇತರರಿದ್ದರು.
ನಿಪ್ಪಾಣಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಮತ್ತು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಜೊಲ್ಲೆ ಗ್ರೂಪ್ ವತಿಯಿಂದ ಮಾರ್ಚ್ 11ರಿಂದ 15ರವರೆಗೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಕೃಷಿ ಉತ್ಸವ ಜರುಗಲಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ತಿಳಿಸಿದರು.
ಪಟ್ಟಣದ ಹಾಲಸಿದ್ಧನಾಥ ಕಾರ್ಖಾನೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಉತ್ಸವದಲ್ಲಿ ಕೃಷಿ, ಆಹಾರ, ಗೃಹೋಪಯೋಗಿ ವಸ್ತು, ವಾಹನ ಮತ್ತು ಕೃಷಿ ಮಳಿಗೆಗಳು ಇರುತ್ತವೆ. ಸುಮಾರು 2 ಲಕ್ಷ ಜನರು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ತಜ್ಞರು ಭಾಗವಹಿಸಲಿದ್ದಾರೆ.
ಇದರಲ್ಲಿ ಕಬ್ಬು, ಉತ್ಪಾದನೆ, ಪಶುಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಣೆ, ಮುಕ್ತ ಶ್ರೇಣಿ ಕೃಷಿ, ಸಾವಯವ ಕೃಷಿ ಕುರಿತು ಮಾಹಿತಿ ನೀಡಲಿವೆ. ಸಂಜೆ ಸಂಗೀತ, ಹಾರ್ಮೋನಿಯಂ ವಾದನ, ಜಾನಪದ ನತ್ಯ, ಭಕ್ತಿಗೀತೆ, ಚೀನಿ ಬ್ಯಾಂಡ್ ಪ್ರದರ್ಶನ, ಮಿಸ್ ಮತ್ತು ಮಿಸೆಸ್ ನಿಪ್ಪಾಣಿ ್ಯಾನ್ಸಿ ಡ್ರೆಸ್ ಆಯೋಜಿಸಲಾಗಿದೆ ಎಂದರು.
ಬೀರೇಶ್ವರ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ಸಮಿತ ಸಾಸನೆ, ರಮೇಶ ಪಾಟೀಲ, ಶ್ರೀಕಾಂತ ಬನ್ನೆ, ರಾಮಗೊಂಡ ಪಾಟೀಲ, ರಾವಸಾಹೇಬ ರಾಳೆ, ಸುಹಾಸ ಗೂಗೆ, ವಿನಾಯಕ ಪಾಟೀಲ, ಕಿರಣ ನಿಕಾಡೆ, ಆನಂದ ಯಾದವ, ಆರ್.ಎಸ್.ಚೌಗುಲೆ, ದೇವಪ್ಪ ದೇವಕಟ್ಟೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ವಿಜಯ ರಾವುತ ಇತರರಿದ್ದರು.