ದರೂರ ಗ್ರಾಮದಲ್ಲಿ ಪಿಕೆಪಿಎಸ್ ಕಟ್ಟಡ ನಿರ್ಮಾಣಕ್ಕೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಶಿವಗೌಡ ಬಸಗೌಡರ, ಸಿದ್ದಗೌಡ ಪಾಟೀಲ, ರವೀಂದ್ರ ಕಲ್ಲೊಳಿ ಇತರರಿದ್ದರು. 
ಬೆಳಗಾವಿ

ರೈತರಿಗೆ ವರವಾದ ಕೃಷಿ ಸಹಕಾರ ಸಂಘ

ನಂದೇಶ್ವರ: ಗ್ರಾಮೀಣ ಭಾಗದಲ್ಲಿರುವ ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ವರವಾಗಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ದರೂರ ಗ್ರಾಮದಲ್ಲಿ ಗುರುವಾರ ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಸಹಕಾರ ಸಂಘ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರಿಗೆ ಸದುಪಯೋಗವಾಗುವ ಅನೇಕ ಯೋಜನೆಗಳನ್ನು ಹೊಂದಿದ್ದು. ಎಲ್ಲ ರೈತರು ಪ್ರಯೋಜನ ಪಡೆಯಬೇಕು ಎಂದರು.
ಸಂಘದ ಅಧ್ಯಕ್ಷ ಶಿವಗೌಡ ಬಸಗೌಡರ, ಉಪಾಧ್ಯಕ್ಷ ಸಿದ್ದಗೌಡ ಪಾಟೀಲ, ರವೀಂದ್ರ ಕಲ್ಲೋಳಿ, ಶಶಿಕಾಂತ ಮಾಯಣ್ಣವರ, ಶ್ರೀಕಾಂತ ಅಸ್ಕಿ, ಸಂಜಯ ಮದಭಾವಿ, ಮಲ್ಲೇಶ ದಳವಾಯಿ, ಅಶೋಕ ಖೇಮಲಾಪುರ, ಭೂಪಾಲ ಕಾಂಬಳೆ, ಶಂಕರ ತರಗಿ, ಅಭಿಯಂತ ರಾಜಶೇಖರ ಟೊಪಗಿ, ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಅರುಣ ಅಥಣಿ, ಜಹಾಂಗೀರ್ ಅವಟಿ, ಮಲ್ಲಯ್ಯ ದಿಗಂಬರಿ ಇತರರಿದ್ದರು.