ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ 11 ಜನ ರೈತರು ಸನ್ಮಾನಿಸಿ ಗೌರವಿಸಲಾಯಿತು. ಎಚ್.ಡಿ.ಕೋಳೇಕರ್ ಇತರರಿದ್ದರು. 
ಬೆಳಗಾವಿ

ಜಿಲ್ಲೆಯ 11ರೈತರಿಗೆ ಕೃಷಿ ಪ್ರಶಸ್ತಿ ಪ್ರದಾನ

ಬೆಳಗಾವಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ 11ಜನ ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯ ಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಪ್ರಶಸ್ತಿ ವಿತರಣೆಯಲ್ಲಿ ಬೆಳಗಾವಿ ಜಿಲ್ಲೆಗೆ ಕಳೆದ ಆರ್ಥಿಕ ವರ್ಷ 2024-25 ರಲ್ಲಿ ಒಟ್ಟು 11 ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಮುಸಕಿನ ಜೋಳ ಪುರುಷವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ. ಮುಸಕಿನ ಜೋಳ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಲ್ಲಾ ಪ್ರಶಸ್ತಿ ಚಿಕ್ಕೋಡಿ ತಾಲೂಕಿಗೆ ಲಭಿಸಿವೆ. ಸೋಯಾ, ಅವರೆ ಪುರುಷ ವಿಭಾಗದ ಸ್ವರ್ಧೆಯಲ್ಲಿ ತೃತೀಯ. ಸೋಯಾ ಅವರೆ ಮಹಿಳಾ ವಿಭಾಗದ ಸ್ವರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಲ್ಲಾ ಪ್ರಶಸ್ತಿ ಬೈಲಹೊಂಗಲ ತಾಲೂಕಿಗೆ ಲಭಿಸಿವೆ. ಭತ್ತ ಪುರುಷ ವಿಭಾಗದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ ಈ ರೀತಿ ಒಟ್ಟು 11 ಪ್ರಶಸ್ತಿ ಬೆಳಗಾವಿ ಜಿಲ್ಲೆಗೆ ಲಭಿಸಿವೆ. ಇದು ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಶಸ್ತಿಗಳು ಜಿಲ್ಲೆಗೆ ಬೆಳಗಾವಿ ಪಾತ್ರವಾಗಿದೆ.
2022-23 ರಲ್ಲಿ ಹಿಂಗಾರು ಜೋಳ (ಮ.ಆ) ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯು ರಾಮದುರ್ಗ ತಾಲೂಕಿಗೆ ಲಭಿಸಿದೆ. 2023-24 ರಲ್ಲಿ ಭತ್ತ ಬೆಳೆ ಮಹಿಳೆಯರ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಖಾನಾಪೂರ ತಾಲೂಕಿಗೆ ಲಭಿಸಿವೆ. 2022-23, 2023-24 ಹಾಗೂ 2024-25 ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 14 ಪ್ರಶಸ್ತಿ ಲಭಿಸಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ ತಿಳಿಸಿದ್ದಾರೆ.
...................................