ಬೈಲಹೊಂಗಲ ಶ್ರೀನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀಗುರು ಸಿದ್ಧಾರೂಢ ಜಾತ್ರಾ ಮಹೋತ್ಸವದ ಆಧ್ಯಾತಿಕ ಸಮಾರಂಭವನ್ನು ಜಗದೀಶ ಶೆಟ್ಟರ ಉದ್ಘಾಟಿಸಿದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ, ಮಹಾಂತೇಶ ಕೌಜಲಗಿ, ಈರಣ್ಣ ಕಡಾಡಿ ಇತರರಿದ್ದರು. 
ಬೆಳಗಾವಿ

ಮಹಾತ್ಮರ ಭಕ್ತಿ ಮಾರ್ಗದಲ್ಲಿ ಮುನ್ನಡೆಯಿರಿ

ಬೈಲಹೊಂಗಲ: ಅಖಂಡ ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ ಶ್ರೀಗುರು ಸಿದ್ಧಾರೂಢರ ಗುರು ಪರಂಪರೆಗೆ ಐತಿಹಾಸಿಕ ಹಿನ್ನಲೆಯಿದೆ.ಮಹಾತ್ಮರು ಹಾಕಿಕೊಟ್ಟ ಭಕ್ತಿ ಮಾರ್ಗದಲ್ಲಿ ಮುನ್ನಡೆದು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಪಟ್ಟಣದ ಶ್ರೀನಗರದಲ್ಲಿರುವ ಶ್ರೀಗುರು ಸಿದ್ಧಾರೂಢ ಮಠದ 3ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತೀಯ ಸನಾತನ ಧರ್ಮದ ಆಚರಣೆ, ಪರಂಪರೆಗಳಿಗೆ ಮಹತ್ವವಿದೆ. ಧಾರ್ಮಿಕ ಆಚರಣೆಗಳಲ್ಲಿ ಎಲ್ಲರೂ ತೊಡಗಿಸಿಕೊಂಡು ಸಂಸ್ಕೃತಿ, ಸಂಪ್ರದಾಯ ಎತ್ತಿ ಹಿಡಿಯಬೇಕು. ಶ್ರೀಮಠದ ಏಳಿಗೆಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸಿದ್ಧಾರೂಢರ ತತ್ತ್ವ, ಉಪದೇಶ ಎಲ್ಲರೂ ಪಾಲಿಸಬೇಕು ಎಂದರು. ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಸುಮಂಗಲೆಯರ ಪೂರ್ಣಕುಂಭ ಮೆರವಣಿಗೆ ನಡೆಯಿತು. ಇದೇ ವೇಳೆ ದಾನಿಗಳನ್ನು ಗೌರವಿಸಲಾಯಿತು. ಇಂಚಲ ಶಿವಯೋಗೀಶ್ವರಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಅದ್ವೆತಾನಂದ ಭಾರತಿ ಸ್ವಾಮೀಜಿ, ಮಹಾಂತಯ್ಯ ಶಾಸಿ, ಹಿರೇಮಠದ ವೀರಯ್ಯ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ,
ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಶಂಕರ ಮಾಡಲಗಿ, ಎ.ಎಸ್.ಸಿದ್ದನಗೌಡರ, ರುದ್ರಗೌಡ ಗೌಡತಿ ಇತರರಿದ್ದರು.