ಇಂಗಳಿಯಲ್ಲಿ ಸಿದ್ಧೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮಾನಂದ ಸ್ವಾಮೀಜಿ, ಬಸವಶರಣ ಸಿದ್ಧಾರೂಢ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಸಿದ್ಧೇಶ್ವರ ಶ್ರೀ ಆದರ್ಶ ರೂಢಿಸಿಕೊಳ್ಳಿ

ಚಿಕ್ಕೋಡಿ: ಭಕ್ತರ ಜ್ಞಾನದಾಹ ನೀಗಿಸಲು ಸಿದ್ಧೇಶ್ವರ ಸ್ವಾಮೀಜಿ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಪರಮಾನಂದವಾಡಿಯ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಇಂಗಳಿ ಗ್ರಾಮದಲ್ಲಿ ಶುಕ್ರವಾರ ಸಿದ್ಧೇಶ್ವರ ಸ್ವಾಮೀಜಿ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳು ಜ್ಞಾನಯೋಗಾಶ್ರಮದ ಚೈತನ್ಯ ಸ್ವರೂಪಿಯಾಗಿದ್ದರು. ಅವರ ಆದರ್ಶ, ವಿಚಾರ ಎಲ್ಲರೂ ಅಳವಡಿಸಿಕೊಳ್ಳಬೇಕು. ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕು ಎಂದರು.
ಸಿಪಿಐ ವಿಶ್ವನಾಥ ಚೌಗುಲಾ ಮಾತನಾಡಿ, ಕಷ್ಟದ ಸಮಯದಲ್ಲಿ ಸಿದ್ಧೇಶ್ವರ ಶ್ರೀ ನೆನೆದರೆ ಕಷ್ಟ ಪರಿಹಾರವಾಗುತ್ತದೆ ಎಂದರು. ಅಲಕನೂರು ಬಸವಶರಣ ಸಿದ್ಧಾರೂಢ ಸ್ವಾಮೀಜಿ, ಸುಭಾಷ ಶಿವಾಳೆ, ಕಾಡಯ್ಯ ಹಿರೇಮಠ ಇತರರು ಇದ್ದರು.