ಕೋ.ಶಿವಾಪುರದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಭೆಯನ್ನು ಗಣ್ಯರು ಉದ್ಘಾಟಿಸಿದರು. ವಿರೂಪಾಕ್ಷ ಮಾಮನಿ, ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ ಇತರರಿದ್ದರು.
- ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಕರೆ
- ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಸಭೆ
ಕೋ.ಶಿವಾಪುರ: ಅರ್ಹ ಮತದಾರರ ಹೆಸರು ಸೇರ್ಪಡೆ, ಅಗತ್ಯ ತಿದ್ದುಪಡಿ ಹಾಗೂ ಮತದಾರರ ಪಟ್ಟಿ ನಿಖರತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಹೇಳಿದರು.
ಗ್ರಾಮದ ಹಿರೇಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಭೆಯಲ್ಲಿ ಮಾತನಾಡಿದರು.
ಗ್ರಾಮಮಟ್ಟದ ಪಕ್ಷದ ಹಿರಿಯ ಕಾರ್ಯಕರ್ತರ ಸಲಹೆ, ಸೂಚನೆ ಹಾಗೂ ಅಗತ್ಯ ಮಾರ್ಗದರ್ಶನ ಪಡೆಯಲಾಯಿತು. ಪಕ್ಷದ ಸಂಘಟನೆ ಬಲವರ್ಧನೆ, ಕಾರ್ಯಕರ್ತರ ಸಕ್ರೀಯ ಭಾಗವಹಿಸುವಿಕೆ ಮತ್ತು ಮುಂಬರುವ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಕುರಿತು ಚರ್ಚೆ ನಡೆಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಕುರಿತು ಮನೆ ಮನೆಗೆ ಮಾಹಿತಿ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು. ತಾಪಂ ಮಾಜಿ ಅಧ್ಯಕ್ಷ ಜಗದೀಶ ಕೌಜಗೇರಿ, ಮಂಡಲ ಉಪಾಧ್ಯಕ್ಷ ಮಹಾಂತೇಶ ಗೋಡಿ, ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ತೊರಗಲ್ಲ, ಮುಖಂಡರಾದ ಬಸವರಾಜ ಪೂಜೇರ, ಮಲ್ಲಿಕಾರ್ಜುನ ಯರಗಟ್ಟಿ, ಮಲ್ಲಿಕಾರ್ಜುನ ಸವದತ್ತಿ, ಮೋಹನ ಪಾಟೀಲ, ಪರ್ವತಗೌಡ ಪಾಟೀಲ, ಅಶೋಕ ಸೋಗಲದ, ಶಿವಾನಂದ ಕಟ್ಟಿಮನಿ, ಪ್ರಜ್ವಲ ಹಿರೇಮಠ, ಶಿವಾನಂದ ಹಾದಿಮನಿ, ಈರಪ್ಪ ತೋಟಗಿ, ಅಡಿವೆಪ್ಪ ಗಡ್ಡಿ, ಮುತ್ತೆಪ್ಪ ಚಂದರಗಿ, ಮಂಜುನಾಥ ಮಾಳೈನವರ, ಗೋಪಾಲ ದೇವರಮನಿ, ಶಂಕ್ರಯ್ಯ ಕಟ್ಟಿಮನಿ, ಮಹಾದೇವಪ್ಪ ಅಕ್ಕತೆಂಗೆರೆಹಾಳ, ಮಹಾದೇವ ಚಂದರಗಿ, ಮಹಾದೇವ ರಂಕನಕೊಪ್ಪ, ಸಂಗಮೇಶ ವಸದ, ಉಮೇಶ ವಸದ, ಮಹಾದೇವ ಕಲಾರಕೊಪ್ಪ, ಚನ್ನಪ್ಪ ಬೆನಚನಮರಡಿ, ಮಹಾವೀರ ಅಂಗಡಿ, ಕುಮಾರ ಹೊಸಟ್ಟಿ, ಆನಂದ ಕುಡ್ಲಿಂಗಪ್ಪಗೋಳ ಇತರರಿದ್ದರು.