ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಶಾಸಕ ಪಿ.ರಾಜೀವ ಮಾತನಾಡಿದರು. ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ಸತೀಶ ಅಪ್ಪಾಜಿಗೋಳ ಇತರರಿದ್ದರು.
ಚಿಕ್ಕೋಡಿ: ಬಿಜೆಪಿ ಕಾರ್ಯಕರ್ತರನ್ನು ಬಲಪಡಿಸಲು, ಪಕ್ಷದ ಸಿದ್ಧಾಂತ ಪ್ರಚಾರ ಮಾಡಲು ಮತ್ತು ಚುನಾವಣಾ ತಂತ್ರ ರೂಪಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಪಿ.ರಾಜೀವ ಹೇಳಿದರು.
ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ನಾಯಕರೊಂದಿಗೆ ಕಾರ್ಯಕರ್ತರ ಸಮಾಲೋಚನೆ, ಹೊಸ ಸದಸ್ಯರ ಸೇರ್ಪಡೆ ಮತ್ತು ಸಮಿತಿಗಳ ರಚನೆ ಮೂಲಕ ಸಂಘಟನೆ ಬಲವರ್ಧನೆ ಮಾಡಲಾಗುತ್ತಿದೆ ಎಂದರು.
ಶಾಸಕರಾದ ಶಶಿಕಲಾ ಜೊಲ್ಲೆ, ದುರ್ಯೋಧನ ಐಹೊಳೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಬಸವರಾಜ ಸನದಿ, ಹಿರಿಯ ಪದಾಧಿಕಾರಿ ಸತ್ಯಪ್ಪ ನಾಯಿಕ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮಾಜಿ ಶಾಸಕ ವಿವೇಕರಾವ ಪಾಟೀಲ, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಸದಾನಂದ ಹಳಿಂಗಳೆ, ಅಮೃತ ಕುಲಕರ್ಣಿ, ಶಿವಾನಂದ ನವಿನಾಳೆ, ಶಾಂಭವಿ ಅಶ್ವತ್ಥಪುರ, ಮಹೇಶ ಬಾತೆ, ಡಾ.ಜ್ಯೋತಿ ಚಿಂಚಲಿಕರ, ಸಂಜೀವ ಪಾಟೀಲ, ನಿಂಗಪ್ಪ ಬೊಕಲೆ, ಲತಾ ಹುದ್ದಾರ, ಬಸವರಾಜ ಸನದಿ, ದುಂಡಪ್ಪ ಬೆಂಡವಾಡೆ, ಅಪ್ಪಾಸಾಹೇಬ ಬ್ಯಾಕುಡೆ, ಡಾ.ಶ್ರೀನಿವಾಸ ಇತರರಿದ್ದರು.