ಬೈಲಹೊಂಗಲದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಮಹಾಂತೇಶ ಕೌಜಲಗಿ ಸನ್ಮಾನಿಸಿದರು. ಭಾಗ್ಯಶ್ರೀ ಹುಗ್ಗಿ, ಬಸವರಾಜ ಜನ್ಮಟ್ಟಿ, ಬುಡ್ಡೇಸಾಬ ಶಿರಸಂಗಿ, ಅರ್ಜುನ ಕಲಕುಟಕರ ಇತರರಿದ್ದರು.
ಬೈಲಹೊಂಗಲ:
ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಲಿತಾಂಶ ಪಡೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ನಗರಸಭೆ ವತಿಯಿಂದ ಈಚೆಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ,
ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಜ್ಞಾನ ಪ್ರಯೋಗಾಲಯ, ಹೊಸ ಕಟ್ಟಡ ಕಾಮಗಾರಿ, ಗ್ರಂಥಾಲಯ, ಶೌಚಗೃಹ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಸೇರಿದಂತೆ ಮೂಲಸೌಕರ್ಯ ಆದ್ಯತೆಯ ಮೇರೆಗೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಮಾತನಾಡಿ, ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಹಾಗೂ ಎಂಕೆಸಿಆರ್ ಬಾಲಕಿಯರ ಪ್ರೌಢಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ನಗರಸಭೆ ಬದ್ಧವಾಗಿದ್ದು, ಶಾಸಕರ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಸವರಾಜ ಜನ್ಮಟ್ಟಿ, ಬುಡ್ಡೇಸಾಬ್ ಶಿರಸಂಗಿ, ಅರ್ಜುನ ಕಲಕುಟಕರ, ಉಳವಪ್ಪ ಬಡ್ಡಿಮನಿ, ಹೇಮಲತಾ ಹಿರೇಮಠ, ಲಕ್ಷ್ಮೀ ಬಡ್ಲಿ, ವಾಣಿಶ್ರೀ ಪತ್ತಾರ, ಜಗದೀಶ ಜಂಬಗಿ, ಪ್ರಕಾಶ ಕಲ್ಲೋಳ್ಳಿ, ಅಂಬಿಕಾ ಕೋಟಬಾಗಿ, ದಿಲಶಾದಬಿ, ಶ್ರೀದೇವಿ ದೇವಲಾಪುರ, ಮುಖ್ಯ ಶಿಕ್ಷಕರಾದ ಎಂ.ಸಿ.ಹಂಗರಕಿ, ತಮ್ಮಣ್ಣ ಬಾಗೇವಾಡಿ ಇತರರಿದ್ದರು.