ನಿರ್ಬಂಧಿತ ವಲಯ ಪ್ರವೇಶಿಸಿದರೆ ಕ್ರಮ 
ಬೆಳಗಾವಿ

ನಿರ್ಬಂಧಿತ ವಲಯ ಪ್ರವೇಶಿಸಿದರೆ ಕ್ರಮ

ಖಾನಾಪುರ:
ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ಪ್ರವಾಸಿಗರು ಕಳಸಾ ನಾಲಾ, ಸಿಂಬೋಲಾ, ವಜ್ರಪೋಹಾ ಮತ್ತು ಚಿಕಲೆ ಜಲಪಾತದಂತಹ ಪ್ರದೇಶಗಳಿಗೆ ಅನುಮತಿ ಇಲ್ಲದೆ ಪ್ರವೇಶಿಸುತ್ತಿದ್ದಾರೆ. ತರಬೇತಿ ಪಡೆದ ಮಾರ್ಗದರ್ಶಕರನ್ನು ಸಂಪರ್ಕಿಸದೆ ಅರಣ್ಯ ಇಲಾಖೆ ಅನುಮತಿ ಪಡೆಯದೆ ಬಹುತೇಕರು ಸೂಕ್ಷ್ಮ ಅರಣ್ಯ ವಲಯಗಳಿಗೆ ಹೋಗುವುದು ಪತ್ತೆಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಜಲಪಾತಗಳ ವೀಡಿಯೋ, ಛಾಯಾಚಿತ್ರಗಳ ಪ್ರಸರಣ ಈ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಂತಹ ಅನಧಿಕೃತ ಚಾರಣ ಅವಘಡಗಳ ಸಂಖ್ಯೆ ಹೆಚ್ಚಿಸುತ್ತ್ತಿದೆ. ಇತ್ತೀಚೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರಡಿ ಅಭಯಾರಣ್ಯದೊಳಗಿನ ಸೂಕ್ಷ್ಮ ನಿಬರ್ಂಧಿತ ವಲಯ ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಂತಹ ಕ್ರಮಗಳು ಮುಂದುವರಿಯಲಿವೆ. ನಿರ್ಬಂಧಿತ ಪ್ರದೇಶ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.