ಚಿಕ್ಕೋಡಿಯಲ್ಲಿ ಬಿಎಲ್‌ಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಸುಭಾಸ ಸಂಪಗಾವಿ ಮಾತನಾಡಿದರು. ರಾಜೇಶ ಬುರ್ಲಿ, ಸಂತೋಷ ಕಾಂಬಳೆ, ಮಹಾದೇವ ಜನಗೌಡರ ಇತರರಿದ್ದರು.
ಚಿಕ್ಕೋಡಿ: ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಬಿಎಲ್‌ಒಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಎಸಿ ಸುಭಾಸ ಸಂಪಗಾವಿ ಹೇಳಿದರು.
ಪಟ್ಟಣದಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಬಿಎಲ್‌ಒಗಳಿಗೆ ಈಚೆಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮನೆ ಮನೆಗೆ ಭೇಟಿ ನೀಡಿ ವಲಸೆ ಹೋದವರ, ಮೃತರ ಹಾಗೂ ಗೈರುಹಾಜರಾದವರ ನಿಖರ ಮಾಹಿತಿ ದಾಖಲಿಸಬೇಕು ಎಂದರು.
ತಹಸೀಲ್ದಾರ್ ರಾಜೇಶ ಬುರ್ಲಿ ಮಾತನಾಡಿ, ಜೂನ್ 22ರಿಂದ 29ರವರೆಗೆ ತರಬೇತಿ ಹಾಗೂ ಜೂನ್ 30ರಿಂದ ಮನೆ ಮನೆ ತಪಾಸಣೆ ನಡೆಯಲಿದೆ. ನಕಲಿ ಹೆಸರು ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದರು. ಅಧಿಕಾರಿಗಳಾದ ಸಂತೋಷ ಕಾಂಬಳೆ, ಮಹಾದೇವ ಜನಗೌಡರ ಇತರರಿದ್ದರು.