ಹಾರೂಗೇರಿ ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭವನ್ನು ಮಾರುತಿ ಶರಣರು ಉದ್ಘಾಟಿಸಿದರು. ಮಹೇಶ ಮಗದುಮ್ಮ, ಬಸವರಾಜಪ್ಪ ಆರ್., ಭೀಮಗೌಡ ಕರ್ಣವಾಡಿ ಇತರರಿದ್ದರು.
ಹಾರೂಗೇರಿ: ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಅಚಲ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಸಾಧನೆ ಸಾಧ್ಯ ಎಂದು ಕೆರೂರ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಮಹೇಶ ಮಗದುಮ್ಮ ಹೇಳಿದರು. ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಭಗವಾನ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಶಾಂತಲಾ ಸಂಗೀತ ವಿದ್ಯಾಲಯ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ಮಾತನಾಡಿ, ಗುಣಮಟ್ಟದ ಶಿಕ್ಷಣದ ಜತೆ ಶಿಸ್ತು, ಸಮಯ ಪಾಲನೆ ಕಲಿಸಿಕೊಡುತ್ತಿರುವ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಮಾರುತಿ ಶರಣರು, ಸಂಸ್ಥೆ ಅಧ್ಯಕ್ಷ ಭೀಮಗೌಡ ಕರ್ಣವಾಡಿ, ಸಿಆರ್‌ಪಿ ಮಹಾಂತೇಶ ಮುಗಳಖೋಡ, ಡಿ.ಎಸ್.ಡಿಗ್ರಿಜ್, ಟಿ.ಬಿ.ಸಾಜನೆ, ಎ.ಜೆ.ಚೌಗಲಾ, ಡಿ.ಎಂ.ನಾಯಿಕ ಇತರರಿದ್ದರು. ಕೆ.ಎಸ್.ಚೌಗಲಾ ಸ್ವಾಗತಿಸಿದರು. ಪ್ರೀತಿ ಬನಾಜ ಹಾಗೂ ದರ್ಶನ ಡಿಗ್ರಜ್ ನಿರೂಪಿಸಿದರು. ಟಿ.ಪಿ.ಕಾಶೆಟ್ಟಿ ವಂದಿಸಿದರು.