ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಪದಕಗಳನ್ನು ಗೆದ್ದ ಶ್ರೇಯಸ್ಸ ಹಟ್ಟಿಕರ, ವಿಕ್ರಮ ಚಿಲನವರ, ಸಿದ್ಧಾಂತ ಕಡಾಲಿ, ಶುಭಂ ಹಟ್ಟಿಕರ ಜತೆಗೆ ತರಬೇತುದಾರ ಅತುಲ ಶಿರೋಳೆ ಇದ್ದಾರೆ. 
ಬೆಳಗಾವಿ

ಅಂತರಾಷ್ಟ್ರೀಯ ಕುಸ್ತಿಯಲ್ಲಿ ಕನ್ನಡಿಗರ ಸಾಧನೆ

ಬೆಳಗಾವಿ: ಮಲೇಷ್ಯಾದ ಕೌಲಾಲಂಪುರದಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ವಿಶ್ವ ಮಿಷನ್ ಒಲಿಂಪಿಕ್ ಕ್ರೀಡಾಕೂಟಗಳ ಒಕ್ಕೂಟ ಜ.12ರಿಂದ 17ರವರೆಗೆ ಏರ್ಪಡಿಸಿದ್ದ ಅಂತರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ 2026ರಲ್ಲಿ ಭಾರತದ ತಂಡ ಸಮಗ್ರ ವೀರಾಗ್ರಣಿ(ಚಾಂಪಿಯನ್‌ಶಿಪ್) ಪಡೆದುಕೊಂಡಿದ್ದು, ಈ ತಂಡಕ್ಕೆ ಬೆಳಗಾವಿಯ ಕನ್ನಡಿಯ ಅತುಲ್ ಶಿರೋಳೆ ಮುಖ್ಯ ತರಬೇತುದಾರರಾಗಿದ್ದು ವಿಶೇಷ.
ಭಾರತವನ್ನು ಪ್ರತಿನಿಧಿಸಿದ್ದ ಒಟ್ಟು 35 ಕುಸ್ತಿಪಟುಗಳ ಪೈಕಿ ವಿವಿಧ ವಿಭಾಗಗಗಳಲ್ಲಿ 6 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಸಮಗ್ರ ವೀರಾಗ್ರಣಿ (ಚಾಂಪಿಯನ್‌ಶಿಪ್) ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಪಾಲ್ಗೊಂಡಿದ್ದವರ ಪೈಕಿ 19 ವರ್ಷದೊಳಗಿನ ವಿಭಾಗದ 65ಕೆಜಿಯಲ್ಲಿ ಶ್ರೇಯಸ್ ದಶರಥ ಹಟ್ಟಿಕರ ಮತ್ತು 60ಕೆಜಿಯಲ್ಲಿ ವಿಕ್ರಮ ಮಂಜುನಾಥ ಚಿಲನವರ ಬೆಳ್ಳಿ ಪದಕ, 14ವರ್ಷದೊಳಗಿನ 62ಕೆಜಿಯಲ್ಲಿ ಸಿದ್ಧಾಂತ ನಿಕೇಶ ಕಡಾಲಿ ಕಂಚು ಹಾಗೂ ಹಿರಿಯರ ವಿಭಾಗದಲ್ಲಿ ಶುಭಂ ಮಾರುತಿ ಹಟ್ಟಿಕ್ಕರ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಭಾರತೀಯ ತಂಡದ ಮುಖ್ಯ ತರಬೇತುದಾರ ಬೆಳಗಾವಿಯ ಅತುಲ್ ಸುರೇಶ ಶಿರೋಳೆ, ಅಮೋಲ ಸಾಠೆ ಮಾರ್ಗದರ್ಶನ ನೀಡಿದ್ದರು.
---