ಹಾಲಳ್ಳಿ ಗ್ರಾಮದಲ್ಲಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ವಿವೇಕಾನಂದ ಹಳಿಂಗಳಿ ಮಹಾರಾಜರು, ರಾಚಪ್ಪ ಮಹಾರಾಜರು, ಅಶೋಕ ಪಾಟೀಲ, ಮಲ್ಲವ್ವ ಈರಗೊಂಡ ಇತರರಿದ್ದರು. 
ಬೆಳಗಾವಿ

ಗುರು ನಾಮಸ್ಮರಣೆಯಿಂದ ಸಾಧನೆ ಸಾಧ್ಯ

ಸಾಧನೆ ಸಾಧ್ಯ
ಅರಟಾಳ: ಗುರು ನಾಮಸ್ಮರಣೆಯಿಂದ ಸಾಧನೆ ಸಾಧ್ಯ ಎಂದು ತೆಲಸಂಗದ ವಿವೇಕಾನಂದ ಹಳಿಂಗಳಿ ಮಹಾರಾಜರು ಹೇಳಿದರು.
ಸಮೀಪದ ಹಾಲಳ್ಳಿ ಗ್ರಾಮದ ಶ್ರೀ ಗಿರಿಮಲ್ಲೇಶ್ವರ ಆಶ್ರಮದಿಂದ ಶ್ರೀಕ್ಷೇತ್ರ ಇಂಚಗೇರಿಮಠಕ್ಕೆ ಹೊರಟ ದಿಂಡಿ ಪಲ್ಲಕ್ಕಿ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಇಂಚಗೇರಿ ಮಠದಲ್ಲಿ ಜರುಗುತ್ತಿರುವ ಭಾವುಸಾಹೇಬ, ಗಿರಿಮಲ್ಲೇಶ್ವರ, ಗುರುಪುತ್ರೇಶ್ವರ, ಜಗನ್ನಾಥ ಮಹಾರಾಜರ ಪುಣ್ಯತಿಥಿ ಸಪ್ತಾಹಕ್ಕೆ ಪಾದಯಾತ್ರೆ ಮೂಲಕ ಸಾಗುವ ನಾವೆಲ್ಲರೂ ಪುಣ್ಯಶಾಲಿಗಳು ಎಂದರು.
ಮೈಗೂರ ರಾಚಪ್ಪ ಮಹಾರಾಜರು, ಅಶೋಕ ಪಾಟೀಲ, ತಮ್ಮಣ್ಣ ಗೌಡಪ್ಪನವರ, ಈರಪ್ಪ ಕೆಂಚಗೊಂಡ, ರಾಯಪ್ಪ ಗೌಡಪ್ಪನವರ, ಮಲ್ಲವ್ವ ಈರಗೊಂಡ, ಬೊರವ್ವ ಗೌಡಪ್ಪನವರ, ಬಂಗಾರೆವ್ವ ಕಿರಾಳಿ ಇತರರಿದ್ದರು.