ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಥಣಿ ಜೆ.ಎ.ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಎಂ.ಪಿ.ಮೇತ್ರಿ, ಪ್ರಕಾಶ ನರಗಟ್ಟಿ, ಎಂ.ಎಸ್.ಚನಗೊಂಡ, ಎನ್.ಚಂದ್ರಶೇಖರ, ಎಸ್.ಆರ್.ಪಾಟೀಲ ಇತರರಿದ್ದರು.
ಅಥಣಿ: ಮೂಡಲಗಿಯ ಶ್ರೀ ಶಿವಬೋಧರಂಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿಪೂರ್ವ ವಿಭಾಗದ ಜಿಲ್ಲಾಮಟ್ಟದ ಬಾಲಕ, ಬಾಲಕಿಯರ ಹ್ಯಾಂಡಬಾಲ್ ಕ್ರೀಡಾಕೂಟದಲ್ಲಿ ಅಥಣಿಯ ಜೆ.ಎ.ಪದವಿಪೂರ್ವ ಮಹಾವಿದ್ಯಾಲಯದ ಬಾಲಕ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೀಪ ಸಂಗೊರಾಮ, ಕಾರ್ಯದರ್ಶಿ ಎಸ್.ವಿ.ಜೋಶಿ, ಪ್ರಾಚಾರ್ಯ ಎಂ.ಪಿ.ಮೇತ್ರಿ, ಪ್ರಕಾಶ ನರಗಟ್ಟಿ, ಎಂ.ಎಸ್.ಚನಗೊಂಡ, ಎನ್.ಚಂದ್ರಶೇಖರ, ಎಸ್.ಆರ್.ಪಾಟೀಲ, ಬಿ.ಎಸ್.ಲೋಕೂರ, ಪ್ರಮೋದ ಪವಾರದೇಸಾಯಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.