ಪ್ರತ್ಯೇಕ ಅಪಘಾತ, ಇಬ್ಬರ ಸಾವು
- ಪ್ರತ್ಯೇಕ ಅಪಘಾತ, ಇಬ್ಬರ ಸಾವು
- ಬೈಕ್ ಸವಾರ ನಿಯಂತ್ರಣ ತಪ್ಪಿ ಅಪಘಾತ
- ಬೈಕ್ ಕಾರು ಮುಖಾಮುಖಿ ಡಿಕ್ಕಿ
- ಮುರಗೋಡ, ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಪ್ರತ್ಯೇಕ ಅಪಘಾತ: ಇಬ್ಬರ ಸಾವು,ಮೂವರಿಗೆ ಗಾಯ
ಬೆಳಗಾವಿ: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತರಾಗಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆಸಿವೆ.
ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಖಾನಾಪುರ ತಾಲೂಕಿನ ಮೋಹಿಶೇತ ಗ್ರಾಮದ ಬಳಿ ದ್ವಿಚಕ್ರ ಸವಾರನೋರ್ವನ ನಿಯಂತ್ರಣ ತಪ್ಪಿ
ರಸ್ತೆ ಕಾಮಗಾರಿಗೆ ಅಳವಡಿಸಿದ್ದ ಸಿಮೆಂಟ್ ಬ್ಲಾಕ್ ಗೆ ಡಿಕ್ಕಿ ಹೊಡೆದು ಮೃತನಾಗಿದ್ದಾನೆ.
ಖಾನಾಪುರ ತಾಲೂಕಿನ ವರ್ಕಡ ಪಾಟಿಯ ಗ್ರಾಮದ ನಿವಾಸಿ ನಾವು ಬಾಬು ಖರಾತ(೨೩) ಮೃತ ಯುವಕ.ಮೃತ ಬೈಕ್ ಸವಾರನು ಲೊಂಡ ಕಡೆಯಿಂದ ಖಾನಾಪುರ ಕಡೆಗೆ ಹೋಗುತ್ತಿರುವ ಅಪಘಾತ ಸಂಭವಿಸಿದೆ.
ಜಿಲ್ಲೆಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಕಾರು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತನಾಗಿ, ಕಾರಿನಲ್ಲಿದ್ದ ಮೂವರು ಗಾಯಗೊಂಡಿರುವ ಘಟನೆ ರಾಮದುರ್ಗ ತಾಲೂಕಿನ ಸೊಪ್ಪಡ್ಲ ಗ್ರಾಮದ ಬಳಿ ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ನಡೆದಿದೆ.
ರಾಮದುರ್ಗ ತಾಲೂಕಿನ ಮುರಕಟ್ನಾಳ ಗ್ರಾಮದ ನಿವಾಸಿ ಲಕ್ಷ್ಮಣ ಬಸಪ್ಪ ಬೂದಿಹಾಳ (೩೪)ಮೃತ ವ್ಯಕ್ತಿ. ಬೆಳಗಾವಿ ಕಡೆಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಕಾರು -ಬೈಕ್ ಗೆ ಎದುರಿನಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತನಾಗಿದ್ದಾನೆ.ಹಾಗೂ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದ ಕಾರು ಚಲಾಯಿಸುತ್ತಿದ್ದ ದಿವ್ಯ ಮನೋಹರ ಜೈನ್ ,ಕರಣ ದಿಲೀಪ ರಾಜಪಾಲಾನಿ,ಸದಾಶಿವ ದೇವಶೆಟ್ಟಿ ಎಂಬುವವರು ಗಾಯಗೊಂಡಿದ್ದಾರೆ.ಕಾರಿನಲ್ಲಿದ್ದವರು ವಿಜಯಪುರದವರು ಎಂದು ತಿಳಿದು ಬಂದಿದೆ.
ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.