ಚಿಕ್ಕೋಡಿಯಲ್ಲಿ ಭಗವಾನ ಮಹಾವೀರ ಪಲ್ಲಕ್ಕಿ ಮೆರವಣಿಗೆ ಜರುಗಿತು. ವರ್ಧಮಾನ ಸದಲಗೆ, ಡಾ.ಸಂಜಯ ಪಾಟೀಲ, ಶೀತಲ ಹಜಾರೆ ಇತರರಿದ್ದರು.
ಚಿಕ್ಕೋಡಿ: ಪಟ್ಟಣದಲ್ಲಿ ಸೋಮವಾರ ಭಗವಾನ ಮಹಾವೀರ ಜನ್ಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಭಗವಾನ ಮಹಾವೀರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಜತೆಗೆ ಜೈನ ಪೇಟೆಯ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಅಭಿಷೇಕ ಮಾಡಲಾಯಿತು.
ಭಗವಾನ ಮಹಾವೀರ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ, ಗುರುವಾರ ಪೇಟೆ, ಕೆಸಿ ರಸ್ತೆ, ಎನ್‌ಎಂ ರಸ್ತೆ ಮೂಲಕ ಮಹಾವೀರ ನಗರದ ಶಾಂತಿನಾಥ ಮಂದಿರಕ್ಕೆ ತಲುಪಿತು. ಅಲ್ಲಿ ಪೂಜೆ ಸಲ್ಲಿಸಿ, ಮಹಾವೀರ ಸ್ಥಾನಕ್ಕೆ ಪೂಜೆ ಸಲ್ಲಿಸಿ, ಮರಳಿ ಶ್ವೇತಾಂಬರ ಮಂದಿರ, ಹೊಸಪೇಟೆ ಗಲ್ಲಿಯ ಮಂದಿರ ಮೂಲಕ ಜೈನ ಪೇಟೆಯ ಮಂದಿರಕ್ಕೆ ಸೇರಲಾಯಿತು. ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು, ಸಂಜೆ ತೊಟ್ಟಿಲು ಕಾರ್ಯಕ್ರಮ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿದವು.
ವರ್ಧಮಾನ ಸದಲಗೆ, ಡಾ.ಸಂಜಯ ಪಾಟೀಲ, ಶೀತಲ ಹಜಾರೆ, ಚಂದ್ರಕಾಂತ ಹುಕ್ಕೇರಿ, ರಾಮಚಂದ್ರ ಜೌಗುಲೆ, ಅನಿಲ ಸದಲಗೆ, ಡಾ.ಪದ್ಮರಾಜ ಪಾಟೀಲ, ಬಾಹುಬಲಿ ನಸಲಾಪುರೆ, ರಾಜು ರೋಖಡೆ, ಪ್ರಕಾಶ ಅಲಗಣ್ಣವರ, ಮಹೇಂದ್ರಕುಮಾರ ಶಹಾ, ಅಮಿತ ಶಹಾ, ಅನೂಪ ಶಹಾ, ರಾವಸಾಹೇಬ ಕೇಸ್ತಿ, ಎಸ್.ಟಿ.ಮುನ್ನೋಳಿ, ಬಿ.ಬಿ.ಹಜಾರೆ, ಸಂಕೇತ ಮೆಹತಾ, ಶಿರೀಷ ಮೆಹತಾ ಸೇರಿದಂತೆ ನೂರಾರು ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.