ನಾಗನೂರು ಪಟ್ಟಣದ ಅರಣ್ಯ ಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ದೇವಸ್ಥಾನಕ್ಕೆ ಭೇಟಿ ನೀಟಿ ದರ್ಶನಾಶೀರ್ವಾದ ಪಡೆದರು. ಸೈದಪ್ಪ ಗದಾಡಿ, ಚಂದ್ರು ಬೆಳಗಲಿ, ಗಣಪತಿ ದೇಸಾರ, ರಮೇಶ ಬೆಟಗೇರಿ ಇತರರಿದ್ದರು. 
ಬೆಳಗಾವಿ

ಉತ್ಸವ ಪರಂಪರೆಯ ಪ್ರತೀಕ

ತಾಲೂಕಿನ ನಾಗನೂರಿನ ಅರಣ್ಯ ಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿ, ಪಟ್ಟಣದಲ್ಲಿ ಎಲ್ಲ ಸಮುದಾಯದವರು ಒಗ್ಗೂಡಿ ಜಾತ್ರೆ ಅಚರಿಸುತ್ತಿರುವುದು ಮಾದರಿಯಾಗಿದೆ. ಜಾತ್ರೆ, ಉತ್ಸವಗಳು ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿವೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪಾಲಿಸಿಕೊಂಡು ಮುನ್ನಡೆಯೋಣ ಎಂದರು.
ಅರಣ್ಯ ಸಿದ್ಧೇಶ್ವರ ಜಾತ್ರಾ ಮಹೋತ್ಸವ ವತಿಯಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಮುಖಂಡರಾದ ಚಂದ್ರು ಬೆಳಗಲಿ, ಸುಭಾಸ ಬೆಳಗಲಿ (ಪಡದಲ್ಲಿ),
ಗಣಪತಿ ದೇಸಾರ, ರಮೇಶ ಬೆಟಗೇರಿ, ನಾಗಪ್ಪ ಬೆಳಕೂಡ, ಹನುಮಂತ ಕಿತ್ತೂರ, ಸಿದ್ದಪ್ಪ ಯಡ್ರಾವಿ, ಸಿದ್ದಪ್ಪ ಗುಡೆನ್ನವರ, ಸಿದ್ಧಲಿಂಗ ವಾಳಕಿ, ಸದಾಶಿವ ಯಡ್ರಾವಿ, ಕೆಂಚಪ್ಪ ಗೊರೋಜಿ, ಸಿದ್ದಪ್ಪ ಗೊರೋಜಿ, ಯಲ್ಲಪ್ಪ ಪೂಜೇರಿ, ಸಿದ್ದಪ್ಪ ಯಡ್ರಾವಿ, ಶ್ರೀಶೈಲ ಕಿತ್ತೂರ ಇತರರಿದ್ದರು.