ಖನಗಾಂವ ಆರ್‌ಎಂಎಸ್‌ಎ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮಹೇಂದ್ರ ಸಿಂಗ್, ಎಂ.ಬಿ.ಪಾಟೀಲ, ಬಿ.ಸಿ.ಸುತಗಟ್ಟಿ ಇತರರಿದ್ದರು. 
ಬೆಳಗಾವಿ

ಸಾಧಿಸಲು ಬೇಕು ಸದೃಢ ದೇಹ

ಮಮದಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಯ ಶಿಖರವೇರಬೇಕಾದರೆ ಮೊದಲು ಸದಢ ದೇಹ ಹೊಂದಿರಬೇಕು ಎಂದು ತವಗ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲ ಮಹೇಂದ್ರ ಸಿಂಗ್ ಹೇಳಿದರು.
ಖನಗಾಂವ ಗ್ರಾಮದ ಸರ್ಕಾರಿ ಆದರ್ಶ ಮಹಾ ವಿದ್ಯಾಲಯ(ಆರ್‌ಎಂಎಸ್‌ಎ) ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಶಿಕ್ಷಕ ಎಂ.ಬಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಅವಶ್ಯ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಬಿ.ಸಿ.ಸುತಗಟ್ಟಿ, ಬಿ.ಎಂ.ಕೊಪ್ಪದ, ನಿರ್ಮಲಾ ವಿರಕ್ತಮಠ, ಎ.ವಿ.ದಳವಾಯಿ ಇತರರಿದ್ದರು.