ಸಪ್ತಸಾಗರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದರೂರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಮುಖಂಡ ಚಿದಾನಂದ ಸವದಿ ಚಾಲನೆ ನೀಡಿದರು. ಸಂಜಯ ನಾಡಗೌಡ, ಡಿ.ಬಿ.ನದ್ಾ, ಮೆಹಬೂಬ್ ಕರಿಸಾಬು, ಎಸ್.ಬಿ.ಕರೋಶಿ, ಎಲ್.ಬಿ.ನಾಯಿಕ, ಧನಪಾಲ ಹಳ್ಳೂರ ಇತರರು ಇದ್ದರು.
ಅಥಣಿ ಗ್ರಾಮೀಣ: ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಮಹತ್ವವಾಗಿದ್ದು, ದೈಹಿಕ ಸದೃಢತೆ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಅಥಣಿ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ದರೂರ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದರೂರ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ವೇದಿಕೆಯಾಗುತ್ತವೆ. ಹೀಗೆ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಮಕ್ಕಳು ಬೆಳೆಯುವ ಜತೆಗೆ ಸದೃಢರಾಗುತ್ತಾರೆ. ಇಂತಹ ಶಿಕ್ಷಣ ಸಂಸ್ಥೆಗಳು ಕೂಡ ಬೆಳೆಯುತ್ತವೆ ಎಂದರು.
ಮುಖಂಡ ಸಂಜಯ ನಾಡಗೌಡ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ಉತ್ತಮ ಕ್ರೀಡಾ ವೇದಿಕೆ ಕಲ್ಪಿಸುತ್ತಿದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.
ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಬಿ.ನದ್ಾ, ಆರ್.ಎಂ.ಸನದಿ, ಮೆಹಬೂಬ್ ಕರಿಸಾಬು, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಸ್.ಬಿ. ಕರೋಶಿ, ಎಲ್.ಬಿ.ನಾಯಿಕ, ಧನಪಾಲ ಹಳ್ಳೂರ, ಲಕ್ಷ್ಮಣ ಜಯಗೋಣಿ, ಅಶೋಕ ಐಗಳಿ, ವಿಪುಲ ಪಂಡಿತ, ಆರ್.ಎ.ಪಾಟೀಲ, ದರೇಪ್ಪ ಚುನಾರ, ರಾಮು ಕುಂಬಾರ, ಅಪ್ಪಾಸಾಬ ಕಾಂಬಳೆ, ಮಹಾಂತೇಶ ಗೂಳಪ್ಪನ್ನವರ, ಮಹಾದೇವ ಬಿಸ್ವಾಗರ ಇತರರಿದ್ದರು.