ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ನದಿ ತೀರದ ಅಶ್ವತ್ಥ ಲಕ್ಷ್ಮೀ-ನರಸಿಂಹ ದೇವಸ್ಥಾನದ ಆವರಣದಲ್ಲಿ ಯೋಗ ದಿನ ಆಚರಿಸಲಾಯಿತು. ವಿಶ್ವೇಶ್ವರ ಹೆಗಡೆ ಕಾಗೇರಿ, ಮಹಾಂತೇಶ ದೊಡಗೌಡರ, ಶ್ರೀಕರ ಕುಲಕರ್ಣಿ, ಶ್ರೀಶೈಲ ತಿಗಡಿ ಇತರರಿದ್ದರು.
ಎಂ.ಕೆ.ಹುಬ್ಬಳ್ಳಿ:
ಮಲಪ್ರಭಾ ನದಿ ತೀರದ ಅಶ್ವತ್ಥ ಲಕ್ಷ್ಮೀ-ನರಸಿಂಹ ದೇವಸ್ಥಾನದ ಆವರಣದಲ್ಲಿ ವಿಶ್ವ ಯೋಗ ದಿನ ಅಂಗವಾಗಿ ಕಿತ್ತೂರು ಬಿಜೆಪಿ ಮಂಡಳ ವತಿಯಿಂದ ಭಾನುವಾರ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಯೋಗದಿಂದ ಎಲ್ಲ ರೋಗ ದೂರವಾಗಲಿದ್ದು, ಪ್ರತಿಯೊಬ್ಬರೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಯೋಗಾಸನ ಮನುಷ್ಯನಿಗೆ ಅವಶ್ಯವಾಗಿದೆ. ಪ್ರತಿದಿನ ಯೋಗಾಸನ ಮಾಡುವುದರಿಂದ ಒತ್ತಡ ನಿವಾರಣೆಯಿಂದ ಮನಸ್ಸು ಹಗುರವಾಗಿ, ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಬಿಜೆಪಿ ಕಿತ್ತೂರು ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಶ್ರೀಶೈಲ ತಿಗಡಿ, ರಾಜು ಬೆಂಡಿಗೇರಿ, ಯುವಮೋರ್ಚಾ ಅಧ್ಯಕ್ಷ ನಾಗರಾಜ ದುರಗದ, ಉಳವಪ್ಪ ಉಳಾಗಡ್ಡಿ, ಸಂದೀಪ ದೇಶಪಾಂಡೆ, ದೇಮಪ್ಪ ಬಸರಗಿ, ಮಹಾಂತೇಶ ಗಾಣಿಗೇರ ಇತರರಿದ್ದರು.