ಉಗರಗೋಳದಲ್ಲಿ ಯುವಕರಿಂದ ಶಕ್ತಿ ಪ್ರದರ್ಶನ ಜರುಗಿತು. ಗುರುಮಹಾಂತ ಸ್ವಾಮೀಜಿ, ಮುನಯ್ಯ ಸ್ವಾಮೀಜಿ ಇತರರಿದ್ದರು.
ಉಗರಗೋಳ: ಗ್ರಾಮದಲ್ಲಿ ಆಗಿಹುಣ್ಣಮೆ ಹಾಗೂ ಗ್ರಾಮದೇವತೆಯರಾದ ದ್ಯಾಮವ್ವದೇವಿ, ದುರ್ಗವ್ವದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಈಚೆಗೆ ಶಕ್ತಿಪ್ರದರ್ಶನ ಜರುಗಿತು.
20 ವರ್ಷದ ಪ್ರವೀಣ ದುಂಡಿ (ಗೋಸಲ್), ವಿಜಯ ಪಡಸುಣಗಿ, ಕಾರ್ತಿಕ ಕುದರಿ ಅವರು 1 ಕ್ವಿಂಟಾಲ್ ಜೋಳದ ಚೀಲ ಹೊತ್ತು ಯಾರ ಸಹಾಯವಿಲ್ಲದೆಯೇ ದೀಢ್ ನಮಸ್ಕಾರ ಹಾಕಿ ಭಕ್ತಿ ಸೇವೆ ಸಲ್ಲಿಸಿದರು. ಜೋಡೆತ್ತು ಸಾಥ್ ನೀಡಿದವು. ಗ್ರಾಮದ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಅರ್ಧ ಕಿಮೀ ವರೆಗೆ ಸಾಗಿ ಗಮನಸೆಳೆದರು.
ಸ್ಥಳೀಯ ನಿರ್ವಾಣೇಶ್ವರಮಠದ ಗುರು ಮಹಾಂತ ಸ್ವಾಮೀಜಿ, ಹಿರೇಕುಂಬಿ ಅಮೋಮಠದ ಮುನಯ್ಯ ಸ್ವಾಮೀಜಿ, ಮಲ್ಲಪ್ಪ ಸಿದ್ದಕ್ಕನವರ, ವಿಠ್ಠಲ ಸಿದ್ದಕ್ಕನವರ, ಹನುಮಂತ ಸಿದ್ದಕ್ಕನವರ, ಮಂಜುನಾಥ ಗುಡೆನ್ನವರ, ಯಲ್ಲಪ್ಪ ದುಂಡಿ, ಮಾರುತಿ ಪಡಸುಣಗಿ, ಬಸಪ್ಪ ಅಳಗವಾಡಿ, ರಾಜನಗೌಡ ಟೋಪಣ್ಣವರ, ನೀಲಪ್ಪ ಸಿದ್ದಕ್ಕನವರ, ಭೀಮಶಿ ಕೂಮಟೋಜಿ, ನಿಂಗಪ್ಪ ಗೋವಪ್ಪನವರ ಇತರರಿದ್ದರು.
ಗ್ರಾಮದೇವತೆಯರಿಗೆ ಉಡಿ ತುಂಬಿದ ಭಕ್ತರು