ಮಲ್ಲಮ್ಮನ ಬೆಳವಡಿ ಗ್ರಾಮದ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಟ್ಯಾಲೆಂಟ್ ಎಕ್ಸ್ ಪೋ ಎಕ್ಸಿಬಿಷನ್‌ನಲ್ಲಿ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಎನ್.ಸಿ.ಯರಗಂಬಳಿಮಠ, ಮಹಾಂತೇಶ ಉಪ್ಪಿನ ಇದ್ದರು.
ಈಶಪ್ರಭು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎಂ.ಕಾಡೇಶನವರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸುವುದು ಪ್ರಮುಖವಾಗಿದೆ. ಪ್ರಾತ್ಯಕ್ಷಿಕೆ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಮುಖ್ಯಶಿಕ್ಷಕ ಪವನ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಬಹಳಷ್ಟು ಉಪಯುಕ್ತವಾಗಿದೆ ಎಂದರು.
ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ನಿವೃತ್ತ ಪ್ರಾಚಾರ್ಯ ಎನ್.ಸಿ.ಯರಗಂಬಳಿಮಠ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ನಿರ್ದೇಶಕರಾದ ನಿಂಗಪ್ಪ ಕರಿಕಟ್ಟಿ, ಬಸಯ್ಯ ಬೋಜಯ್ಯನವರ, ಅಶೋಕ ಮಾರಿಹಾಳ, ನಿರ್ಣಾಯಕರಾದ ವೀರೇಶ ಕಾಡೇಶನವರ, ಶ್ರೀನಿವಾಸ ಕುಲಕರ್ಣಿ ಇತರರಿದ್ದರು. ಶಿಕ್ಷಕಿ ತೇಜಸ್ವಿನಿ ಹೂಲಿಮಠ ನಿರೂಪಿಸಿದರು. ಸವಿತಾ ಕಾಡೇಶನವರ ವಂದಿಸಿದರು.