ರಾಮದುರ್ಗ ನಗರದ ಬೆಂಬಳಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿಯಲ್ಲಿ ಎಸ್.ಎಸ್.ಸುಲ್ತಾನಪುರ ಮಾತನಾಡಿದರು. ಡಾ.ಪಿ.ಬಿ.ತೆಗ್ಗಿಹಳ್ಳಿ, ಡಾ.ಆರ್.ಎಲ್.ಕುಳ್ಳೂರ ಇತರರಿದ್ದರು. 
ಬೆಳಗಾವಿ

ವಚನಗಳಿಂದ ಬದುಕು ಉದಾತ್ತ

ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿ ಸಭಾಭವನದಲ್ಲಿ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ಬಸವಣ್ಣನವರಂತಹ ಮಹಾತ್ಮರ ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದ ಸಂಯೋಜಕ ಎಸ್.ಲೇಪಾಕ್ಷಿ ಮಾತನಾಡಿ, 12ನೇ ಶತಮಾನದ ಬಸವೇಶ್ವರ ವಚನಗಳಲ್ಲಿ ಇಡೀ ಸಂವಿಧಾನ ಅಡಗಿದೆ. ಅವುಗಳನ್ನು ಪಾಲಿಸಿದಲ್ಲಿ ಮಾದರಿ ಬದುಕು ನಮ್ಮದಾಗುತ್ತದೆ ಎಂದರು.
ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ, ಡಾ.ಆರ್.ಎಲ್.ಕುಳ್ಳೂರ, ಡಿ.ಎಂ.ಮುಗೇರ, ಮುಖ್ಯಶಿಕ್ಷಕರಾದ ಸಚಿನ ತೋಟಗೇರ, ಎಸ್.ಎಸ್.ಜೋಗಳೆ ಇತರರಿದ್ದರು. ಪ್ರೊ.ಎಸ್.ಎ.ಅಥಣಿ, ಪ್ರೊ.ಎಸ್.ಕೆ.ರಂಗಪ್ಪಗೋಳ ಕಾರ್ಯಕ್ರಮ ನಿರ್ವಹಿಸಿದರು.