ನಾಗನೂರು ಗ್ರಾಮದಲ್ಲಿ ಚಿತ್ರನಟ ರಮೇಶ ಪರವಿನಾಯ್ಕರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಈಶ್ವರ ಹೋಟಿ ಇತರರಿದ್ದರು.
ಬೈಲಹೊಂಗಲ: ಸಾಧಕರನ್ನು ಗುರುತಿಸಿ ಗೌರವಿಸುವ ಪರಂಪರೆ ಇಂದಿನ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆ ಎಂದು ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗನೂರು ಗ್ರಾಮದ ಶಿವಬಸವ ಸಭಾಭವನದಲ್ಲಿ ಚಿತ್ರನಟ ರಮೇಶ ಪರವಿನಾಯ್ಕರ ಜನ್ಮದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಚಿತ್ರನಟ ರಮೇಶ ಪರವಿನಾಯ್ಕರ ಮಾತನಾಡಿ, ಜನಸೇವೆಗೆ ಅವಕಾಶ ನೀಡಿದ ನಾಗನೂರು ಜನರ ಪ್ರೀತಿ-ವಿಶ್ವಾಸಕ್ಕೆ ಸದಾ ಚಿರಋಣಿ ಎಂದರು.
ಅಬಕಾರಿ ಇಲಾಖೆ ಸಿಪಿಐ ಬಸವರಾಜ ಸಂಗಪ್ಪ ಕೊರವಿನಕೊಪ್ಪ, ಪತ್ರಕರ್ತ ಈಶ್ವರ ಹೋಟಿ ಮಾತನಾಡಿದರು. ದೊಡ್ಡನಾಯ್ಕ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಬೆಮುಲ್ ನಿರ್ದೇಶಕ ಡಾ.ಬಸವರಾಜ ಪರವಣ್ಣವರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಸಿದ್ಧಯ್ಯ ಹಿರೇಮಠ, ಬಸನಗೌಡ ಕೊಳದೂರ, ಟಿಎಚ್‌ಒ ಡಾ.ಸಂಜಯ ಸಿದ್ದಣ್ಣವರ, ಜಿಪಂ ಮಾಜಿ ಸದಸ್ಯ ಶಿವನಸಿಂಗ್ ಮೋಖಾಶಿ, ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಲಕ್ಷ್ಮೀ ಅರೆಬೆಂಚಿ, ರವಿ ಪರವಿನಾಯ್ಕರ, ಅಬಕಾರಿ ನಿರೀಕ್ಷಕ ಶಿವಲಿಂಗಪ್ಪ ಭದ್ರಣ್ಣವರ, ಚಂದ್ರಶೇಖರ ತುರಮರಿ, ಚಂದ್ರಶೇಖರ ಕೊಪ್ಪದ ಇತರರಿದ್ದರು. ಮುಖ್ಯಶಿಕ್ಷಕ ಪ್ರಕಾಶ ನಾಯ್ಕರ ನಿರೂಪಿಸಿದರು.