ಬಾಡಗಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕನಕ ಜಯಂತಿ ಆಚರಿಸಲಾಯಿತು. ಸದಾನಂದ ಮಾಡಗ್ಯಾಳ, ಸಂಗಯ್ಯ ಹಿರೇಮಠ ಇತರರಿದ್ದರು. 
ಬೆಳಗಾವಿ

ಸಮಾನತೆ ಸಂದೇಶ ಸಾರಿದ ಕೀರ್ತನೆ

ಅರಟಾಳ: ಕನಕದಾಸರು ರಚಿಸಿದ ಕೀರ್ತನೆ ಜೀವನಕ್ಕೆ ಅವಶ್ಯವಾದ ಸಂದೇಶ ಸಾರುತ್ತಿವೆ ಎಂದು ಉಪನ್ಯಾಸಕ ಸದಾನಂದ ಮಾಡಗ್ಯಾಳ ಹೇಳಿದರು.
ಸಮೀಪದ ಬಾಡಗಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಇತ್ಯಾದಿಗಳನ್ನು ತಪ್ಪದೇ ಓದಬೇಕು ಎಂದರು. 
ಸಂಗಯ್ಯ ಹಿರೇಮಠ ಸ್ವಾಮೀಜಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಮಲ್ಲಪ್ಪ ಢಂಗಿ, ಸಿದ್ದು ಹಳ್ಳಿ, ರಾಮಚಂದ್ರ ಬಿಜ್ಜರಗಿ, ಯಲ್ಲಪ್ಪ ಪಡಲಸಗಿ, ಚಂದ್ರಕಾಂತ ಮಮದಾಪುರ, ಸತ್ತೆಪ್ಪ ಬಿರಾದಾರ, ಸಿದ್ದು ಜೋಗಾಣಿ, ರಾಜು ಬಿರಾದಾರ, ಮನೋಹರ ಜಂಬಗಿ, ಸುರೇಶ ಸನದಿ, ಬಸಪ್ಪ ತೇಲಿ, ಸಂಗಪ್ಪ ಮುಧೋಳ ಇತರರಿದ್ದರು.