ರೇಣುಕಾ ಯಲ್ಲಮ್ಮದೇವಿಯ ಕಂಕಣ ಮಂಗಳಸೂತ್ರ ವಿಸರ್ಜನೆ ಪ್ರಯುಕ್ತ ಮಹಾಯಜ್ಞ ನೆರವೇರಿತು. 
ಬೆಳಗಾವಿ

ಯಲ್ಲಮ್ಮನಗುಡ್ಡದಲ್ಲಿ ಅದ್ದೂರಿ ಜಾತ್ರೆ

ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಗುರುವಾರ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಅದ್ದೂರಿಯಾಗಿ ನೆರವೇರಿತು.
ಅಸಂಖ್ಯೆ ಭಕ್ತರು ದೇವಿ ದರ್ಶನ ಪಡೆದರು. ಭಕ್ತಿಯಿಂದ ಧಾರ್ಮಿಕ ಆಚರಣೆ ಕೈಗೊಂಡರು. ದೇವಸ್ಥಾನದಲ್ಲಿ ಬುಧವಾರ ರೇಣುಕಾ ಯಲ್ಲಮ್ಮ ದೇವಿಯ ಕಂಕಣ ಮಂಗಳಸೂತ್ರ ವಿಸರ್ಜ ನೋತ್ಸವ ನಡೆಯಿತು. ಗುರುವಾರ ಮಹಾಯಜ್ಞ ವಿಧಿವತ್ತಾಗಿ ನೆರವೇರಿತು. ಯಲ್ಲಮ್ಮದೇವಿ ತವರೂರಾದ ಹರಳಕಟ್ಟಿಯಿಂದ ಹಿರಿಯರು ಸೀರೆ, ಕುಪ್ಪಸ, ಬಳೆಗಳು, ಅರಿಶಿಣ, ಕುಂಕುಮ ತಂದು ಧಾರ್ಮಿಕ ವಿಧಿ ಕೈಗೊಂಡರು. ಹೂಲಿ ಹಿರೇಮಠದ ಅಜ್ಜಯ್ಯ ಶಾಸಿಗಳ ನೇತೃತ್ವದಲ್ಲಿ ಹೋಮ-ಹವನ ನೆರವೇರಿತು.
ಉಧೋ ಉಧೋ... ಯಲ್ಲಮ್ಮ ಜೈಕಾರ ಮುಗಿಲುಮುಟ್ಟಿತ್ತು. ಭಕ್ತರು. ದೇವಿಯ ನಾಮಸ್ಮರಣೆ ಮಾಡುತ್ತ ಗುಡ್ಡದತ್ತ ಆಗಮಿಸಿದರು. ವಾದ್ಯಮೇಳಗಳು ಜನರನ್ನು ರಂಜಿಸಿದವು. ಉಗರಗೋಳ, ಜೋಗುಳ ಬಾವಿ ಮತ್ತು ಸವದತ್ತಿ ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಯಲ್ಲಮ್ಮ ದೇವಸ್ಥಾನ ಅಭಿವದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಸಿಪಿಐ ಸುರೇಶ ಬೆಂಡೆಗೊಂಬಳ, ಪಿಎಸ್‌ಐ
ಕೆ.ಎಂ. ಬನ್ನೂರ, ಅಲ್ಲಮಪ್ರಭು ಪ್ರಭುನವರ ಇತರರಿದ್ದರು.