ಬಾಡಗಿ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ಸಿದ್ರಾಮ ಪೂಜಾರಿ, ಮಲ್ಲಪ್ಪ ಡಂಗಿ, ಸಿದ್ದು ಹಳ್ಳಿ, ಬಿ.ಆರ್.ಡಂಗಿ ಇತರರಿದ್ದರು.
ಅರಟಾಳ: ಸಮೀಪದ ಬಾಡಗಿ ಗ್ರಾಮದಲ್ಲಿ ಹನುಮಾನ ದೇವರ ಜಾತ್ರೆ ಅಂಗವಾಗಿ ಶನಿವಾರ ಪಲ್ಲಕ್ಕಿ ಉತ್ಸವ ಮತ್ತು ನೀರೋಕಳಿ ಅದ್ದೂರಿಯಾಗಿ ನಡೆಯಿತು.
ಭಕ್ತರು ದೇವರಿಗೆ ನೈವೇದ್ಯ ಅರ್ಪಿಸಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿ ಕೃತಾರ್ಥರಾದರು.
ಉತ್ಸವದಲ್ಲಿ ಕುದುರೆ ಕುಣಿತ, ಡೊಳ್ಳು ಕುಣಿತ, ಕುಂಭ ಮೆರವಣಿಗೆ ಹಾಗೂ ವಿವಿಧ ಕಲಾವಿದರ ಕಲಾ ಪ್ರದರ್ಶನ ಜನಮನ ಸೆಳೆದವು. ನೂರಾರು ಹನುಮ ವೇಷಾಧಾರಿಗಳು ನೂರಾರು ಅಡಿ ಎತ್ತರದ ಕಂಬದ ತುದಿಗೆ ನೀರು ಎಸೆದು ಶಕ್ತಿ ಪ್ರದರ್ಶನ ತೋರಿದರು.
ಹತ್ತಾರು ಗ್ರಾಮಗಳ ಹನುಮನ ಭಕ್ತರು ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಸೇವೆ ಸಲ್ಲಿಸಿ, ಜನಮನ್ನಣೆ ಪಡೆದರು.
ವಿವಿಧ ಗ್ರಾಮಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು. ಅರ್ಚಕ ಸಿದ್ರಾಮ ಪೂಜಾರಿ, ತಾಪಂ ಮಾಜಿ ಸದಸ್ಯ ಮಲ್ಲಪ್ಪ ಡಂಗಿ, ಸಿದ್ದು ಹಳ್ಳಿ, ಬಿ.ಆರ್.ಡಂಗಿ, ಶಿವಾನಂದ ನೇಮಗೌಡ, ಸತ್ಯಪ್ಪ ಬಿರಾದಾರ, ಸಾಬು ತೇಲಿ, ಚಂದ್ರಕಾಂತ ಮಮದಾಪುರ, ರಾಮಚಂದ್ರ ಬಿಜ್ಜರಗಿ, ಮನೋಹರ ಜಂಬಗಿ, ಭೀಮರಾಯ ಪೂಜಾರಿ ಇತರರಿದ್ದರು.