ಸವದತ್ತಿಯ ಕಾಡಸಿದ್ಧೇಶ್ವರ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಸಮಾರಂಭದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ರಾಮನಗೌಡ ಪಾಟೀಲ, ಡಾ.ಸಿ.ಬಿ.ನಾವದಗಿ, ಡಾ.ಎ.ಸಿ.ಕಬ್ಬಿಣ ಅವರನ್ನು ಸನ್ಮಾನಿಸಲಾಯಿತು. ಶಾಸಕ ವಿಶ್ವಾಸ ವೈದ್ಯ, ವಿರೂಪಾಕ್ಷ ಮಾಮನಿ, ಸದಾಶಿವ ಕೌಜಲಗಿ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಸಂಸ್ಕೃತಿ, ಪರಂಪರೆ ಉಳಿಸುವ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ವಿಶ್ವಾಸ ವೈದ್ಯ ಹೇಳಿಕೆ
  • ರೈತರು, ಭಕ್ತರ ಸಹಕಾರ ಶ್ಲಾಘನೀಯ
ಸವದತ್ತಿ: ಗ್ರಾಮದೇವಿ ಜಾತ್ರಾ ಮಹೋತ್ಸವ ಕೇವಲ ಧಾರ್ಮಿಕ ಆಚರಣೆಯಲ್ಲ, ಸಮಾಜದ ಸಂಸ್ಕೃತಿ, ಪರಂಪರೆ, ಸಹೋದರತ್ವ ಹಾಗೂ ಭಕ್ತಿಭಾವ ಉಳಿಸಿ ಬೆಳೆಸುವ ಜೀವಂತ ಪರಂಪರೆಯಾಗಿದೆ ಎಂದು ಜಾತ್ರಾ ಕಮಿಟಿ ಗೌರವಾಧ್ಯಕ್ಷ, ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಸುಮಾರು 45 ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮದೇವಿ ಜಾತ್ರೆ ಸವದತ್ತಿಯ ಐತಿಹಾಸಿಕ ಮಹತ್ವ ಸಾರಿದೆ. ಜಾತ್ರೆಯ ಯಶಸ್ಸಿಗೆ ಸಾರ್ವಜನಿಕರು, ರೈತರು, ಭಕ್ತರು ಹಾಗೂ ವಿವಿಧ ಸಮಿತಿಗಳ ಸಹಕಾರ ಶ್ಲಾಘನೀಯ ಎಂದು ಹೇಳಿದರು.
ಜಾತ್ರಾ ಕಮಿಟಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಜಾತ್ರೆ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೆ ಸಮಾಜದಲ್ಲಿ ಒಗ್ಗಟ್ಟು, ಸೌಹಾರ್ದ ಹಾಗೂ ಭಕ್ತಿಭಾವ ಬೆಳೆಸುವ ಮಹೋತ್ಸವವಾಗಿದೆ ಎಂದರು. ಭಕ್ತರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಸಮಾಜದಲ್ಲಿ ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಯುವಪೀಳಿಗೆ ಧಾರ್ಮಿಕ ಸಂಸ್ಕೃತಿಯತ್ತ ಹೆಚ್ಚು ಒಲವು ತೋರಬೇಕು ಎಂದರು.
ಡಾ.ಮಹಾಂತ ಸಾಮೀಜಿ, ಅಮರಸಿದ್ಧೇಶ್ವರ ಸ್ವಾಮೀಜಿ, ಅಭಿನವ ಶಾಂತಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ದೇವಿ ಮಹಾತ್ಮೆ ಕುರಿತು ಪ್ರವಚನ ನೀಡಿದರು.
ಮಾಜಿ ಶಾಸಕ ರಾಮನಗೌಡ ಪಾಟೀಲ ಅಧ್ಯಕ್ಷೀಯ ಭಾಷಣ ಮಾಡಿದರು. ಶಾಸಕ ಮಹಾದೇವಪ್ಪ ಯಾದವಾಡ, ಉದ್ಯಮಿ ಸದಾಶಿವ ಕೌಜಲಗಿ, ಹಿರಿಯ ವೈದ್ಯ ಡಾ.ಸಿ.ಬಿ.ನಾವದಗಿ ಹಾಗೂ ಡಾ.ಎ.ಸಿ.ಕಬ್ಬಿಣ ಅವರನ್ನು ಸನ್ಮಾನಿಸಲಾಯಿತು.
ನೀಲಪ್ಪ ಅಣ್ಣಿಗೇರಿ, ಸಂಜೀವ ನವಲಗುಂದ, ಬಾಬು ಇನಾಮತಿ, ಸುಧೀಂದ್ರ ವೈದ್ಯ, ಸಿ.ಬಿ.ದೊಡ್ಡಗೌಡ್ರ, ಕೆ.ಪಿ.ಅನಿಗೋಳ, ಶಿವಾನಂದ ಹೂಗಾರ, ವಿಜಯ ಅಂಗಡಿ, ಸುರೇಶ ಬೆಳವಡಿ ಹಾಗೂ ಡಾ.ವೈ.ಎಂ.ಯಾಕೋಳ್ಳಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎನ್.ಬಿ.ಸ್ಟೆಪ್ ಅಪ್ ಡಾನ್ಸ್ ಗ್ರೂಪ್ ವತಿಯಿಂದ ಗುಂಪು ನತ್ಯಗಳು ಹಾಗೂ ರಾಘವೇಂದ್ರ ಮೆಲೋಡಿಸ್ ಗೋಕಾಕ ತಂಡದಿಂದ ಜಾನಪದ ಜಾತ್ರೆ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.