ಕಲ್ಯಾಣ ಮಂಡಳಿ,ಅಸಂಘಟಿತ ಕಾರ್ಮಿಕರ  
ಬೆಳಗಾವಿ

ಅನರ್ಹ ಕಾರ್ಮಿಕರ ಪತ್ತೆಗೆ ನನೆಗುದಿಗೆ!

ಬೆಳಗಾವಿ
ರಾಜ್ಯಾದ್ಯಂತ ಕಾರ್ಮಿಕ ಇಲಾಖೆಯಲ್ಲಿ ವಿವಿಧ ಕಾರ್ಮಿಕ ಕಾಯ್ದೆಯಡಿ ನೋಂದಣಿಯಾಗಿರುವ ಕಾರ್ಮಿಕರಲ್ಲಿ ಅರ್ಹ ಮತ್ತು ಅನರ್ಹರ ಪತ್ತೆ ಕಾರ್ಯ ವರ್ಷದಿಂದ ನನೆಗುದಿಗೆ ಬಿದ್ದಿದೆ!
ಹೌದು. ಕಲ್ಯಾಣ ಮಂಡಳಿ,ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವ್ಯಾಪ್ತಿಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ, ಕಾರ್ಖಾನೆ ಕಾಯ್ದೆ, ತೋಟ ಕಾರ್ಮಿಕ ಕಾಯ್ದೆ, ಬಿಡಿ ಮತ್ತು ಸಿಗರೇಟ್ ಕಾಯ್ದೆ ಅಡಿಯಲ್ಲಿ ನೋಂದಣಿಯಾಗಿರುವ ಅಂದಾಜು 70.10 ಲಕ್ಷ ಕಾರ್ಮಿಕರ ಗುರುತಿನ ಚೀಟಿ, ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಜೋಡಣೆ ಕಾರ್ಯ ಅರ್ಧಕ್ಕೆ ಮೊಟಕುಗೊಂಡಿದೆ. ಹೀಗಾಗಿ ಅರ್ಹ ಕಾರ್ಮಿಕರು ಸರ್ಕಾರಿ ಸೌಲಭ್ಯಕ್ಕಾಗಿ ಪರದಾಡುತ್ತಿದ್ದಾರೆ.
ಈಗಾಗಲೇ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಮಾಡಲಾಗಿದೆ. ಆದರೆ, ಇದರಲ್ಲಿ ಅರ್ಹ ಮತ್ತು ಅನರ್ಹ ಕಾರ್ಮಿಕರು ಯಾರೆಂಬುದು ಗೊತ್ತಾಗುತ್ತಿಲ್ಲ. ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಮಿಕರ ವೇತನ ಮಾತ್ರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿದೆ. ಆದರೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕೂಲಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿಲ್ಲ. ಇದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆದಾಖಲೆ ಪರಿಶೀಲನೆ,ಸಾಮಾಜಿಕ ಲೆಕ್ಕ ಪರಿಶೋಧನೆ ವೇಳೆ ಶೇ.30ರಷ್ಟು ಅನರ್ಹ ಕಾರ್ಮಿಕರ ಕಾರ್ಡ್ ಪತ್ತೆಯಾಗಿವೆ. ಹೀಗಾಗಿ ವಾಸ್ತವದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನ ಖಚಿತ ಪಡಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಟ್ಟಡ, ವಾಣಿಜ್ಯ ಸಂಸ್ಥೆಗಳಲ್ಲಿ , ಕೈಗಾರಿಕೆ, ಹೋಟೆಲ್ ಸೇರಿ ವಿವಿಧ ವಲಯಗಳಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರ ಆರೋಗ್ಯ, ಮಕ್ಕಳಿಗೆ ಶಿಕ್ಷಣ, ವಸತಿ ಸೌಲಭ್ಯ ಸೇರಿ ವಿವಿಧ ಕಲ್ಯಾಣ ಕಾರ್ಯಕ್ರಮಕ್ಕಾಗಿ ಸರ್ಕಾರಗಳು ಪ್ರತಿ ವರ್ಷ ನೂರಾರು ಕೋಟಿ ರೂ. ಅನುದಾನ ಮೀಸಲಿಡುತ್ತಿದೆ. ಆದರೆ, ಬಹಳಷ್ಟು ಅರ್ಹ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೆಲವು ಕಡೆ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಈ ಕುರಿತು ಕಾರ್ಮಿಕ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ಕಾರ್ಮಿಕ ಸಂಘಟನೆ ಮುಖಂಡರು ದೂರಿದ್ದಾರೆ.
..........................
ಬಾಕ್ಸ್
ಪ್ರತಿ ವರ್ಷ ನವೀಕರಣ ಕಡ್ಡಾಯ
ಕಾರ್ಮಿಕ ಇಲಾಖೆ ವ್ಯಾಪ್ತಿಯ ವಿವಿಧ ಮಂಡಳಿ ಅಡಿಯಲ್ಲಿ ನೊಂದಾಯಿತ ಕಾರ್ಮಿಕರು ಪಡೆದುಕೊಂಡಿರುವ ಕಾರ್ಮಿಕ ಕಾರ್ಡ್ ಪ್ರತಿ ವರ್ಷ ಕಡ್ಡಾಯವಾಗಿ ಕವೀಕರಣ ಮಾಡಿಕೊಳ್ಳಬೇಕು. ಆದರೆ, ಬಹುತೇಕ ಕಾರ್ಮಿಕರು ಸೌಲಭ್ಯಕ್ಕಾಗಿ ಮಾತ್ರ ಕಾರ್ಡ್ ಸೀಮಿತಗೊಳಿಸಿದ್ದಾರೆ. ಹೀಗಾಗಿ ಶೇ.35ರಷ್ಟು ಕಾರ್ಮಿಕರು ಕಾರ್ಡ್ ನವೀಕರಣ ಮಾಡಿಕೊಂಡಿಲ್ಲ. ಕಟ್ಟಡ, ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರು ನೊಂದಣಿ ಕೂಡ ಮಾಡಿಕೊಂಡಿಲ್ಲ. ಕೆಲವರು ಪದೇ ಪದೇ ಮೊಬೈಲ್ ಸಂಖ್ಯೆ ಬದಲಾಯಿಸುತ್ತಿರುವುದು ದಾಖಲೆ ಜೋಡಣೆಗೆ ಸಮಸ್ಯೆ ಆಗುತ್ತಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ದೂರಿದ್ದಾರೆ.
................................
ಬಾಕ್ಸ್
ವಿವಿಧ ಕಾಯ್ದೆಯಡಿ ನೊಂದಣಿಯಾಗಿರುವ ಕಾರ್ಮಿಕರ ವಿವರ
ವಿಭಾಗ ಅಂಕಿ ಸಂಖ್ಯೆ
ಅಂಗಡಿ,ವಾಣಿಜ್ಯ ಸಂಸ್ಥೆ - 52,28,161
ಕಾರ್ಖಾನೆ - 17,27,714
ತೋಟ ಕಾರ್ಮಿಕ - 31,137
ಬಿಡಿ ಮತ್ತು ಸಿಗರೇಟ್ - 2,40,499
...................................
ಕೋಟ್ಸ್
ಈಗಾಗಲೇ ನೊಂದಾಯಿತ ಹಳೆ ಕಾರ್ಮಿಕರ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಜೋಡಣೆ ಪರಿಶೀಲನೆ ನಡೆಸಲಾಗುತ್ತಿದೆ. ಹೊಸದಾಗಿ ನೊಂದಾಯಿತ ಕಾರ್ಮಿಕರ ದಾಖಲೆ ಜೋಡಣೆ ಪ್ರಗತಿ ಹಂತದಲ್ಲಿದೆ.
- ಮಲ್ಲಿಕಾರ್ಜುನ್ ಜೋಗುರ, ಜಿಲ್ಲಾ ಕಾರ್ಮಿಕ ಅಧಿಕಾರಿ
.............