ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ಛಲವಾದಿ ಮುಖಂಡರ ಚಿಂತನ-ಮಂಥನ ಕಾರ್ಯಾಗಾರವನ್ನು ಸಾಹಿತಿ ಡಾ.ವಿಠ್ಠಲ ವಗ್ಗನ ಉದ್ಘಾಟಿಸಿದರು. ಡಾ.ಸುಬ್ಬರಾವ ಎಂಟೆತ್ತಿನವರ, ಬಿ.ಎಸ್.ನಾಡಕರ್ಣಿ, ಮಹಾದೇವ ಮಹಾರಾಜರು, ಮಲ್ಲೇಶ ಚೌಗಲೆ ಇತರರಿದ್ದರು. 
ಬೆಳಗಾವಿ

ಅಂಬೇಡ್ಕರ್ ಸಿದ್ಧಾಂತ ನಾಶ ಮಾಡುವ ಹುನ್ನಾರ

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಕೆಲ ಸಮುದಾಯದವರು ತಮ್ಮವರೆಂದು ಬಿಂಬಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಸಾಹಿತಿ ಡಾ.ವಿಠ್ಠಲ ವಗ್ಗನ ಹೇಳಿದರು.

ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಛಲವಾದಿ ಮುಖಂಡರ ಚಿಂತನ- ಮಂಥನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯದವರು ರಾಜಕೀಯವಾಗಿ ಗುರುತಿಸಿ ಕೊಳ್ಳದಿದ್ದಲ್ಲಿ ಯಾವ ರಂಗದಲ್ಲೂ ಬೆಳೆಯಲು ಸಾಧ್ಯವಿಲ್ಲ. ನಾಯಕತ್ವದ ಕೊರತೆಯಿಂದ ಛಲವಾದಿ ಸಮುದಾಯದವರನ್ನು ಒಡೆದು ಆಳುತ್ತಿದ್ದಾರೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಸಿದ್ಧಾಂತ ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಛಲವಾದಿ ಸಮುದಾಯ ಮೂಲತಃ ನಾಗವಂಶಕ್ಕೆ ಸೇರಿದವರು ಹಾಗೂ ಮೂಲ ಭೌದ್ದ ಧರ್ಮದವರು ಎಂದು ತಿಳಿಸಿದರು.
ಸಾಹಿತಿ ಡಾ.ಸುಬ್ಬರಾವ ಎಂಟೆತ್ತಿನವರ ಮಾತನಾಡಿ, ಈ ಮೊದಲು ನಾವು ಆಳುವ ಜನರಾಗಿದ್ದೇವು. ಆದರೆ, ಇಂದು ಅಳುವ ಜನರಾಗಿದ್ದೇವೆ. ಛಲವಾದಿ ಸಮುದಾಯದಲ್ಲಿ ಹೆಚ್ಚು ಶಿಕ್ಷಣ ಪಡೆದವರಿಂದಲೇ ಹಾನಿಯಾಗುತ್ತಿರುವುದು ವಿಷಾದನೀಯ ಎಂದರು.
ಅಂಬೇಡ್ಕರವಾದಿ ಬಿ.ಎಸ್.ನಾಡಕರ್ಣಿ ಮಾತನಾಡಿದರು. ಮಹಾದೇವ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಮಹೇಂದ್ರ ತಮ್ಮನ್ನವರ, ಮಲ್ಲೇಶ ಚೌಗಲೆ, ಸುರೇಶ ತಳವಾರ, ಅಶೋಕ ಅಸೋದೆ, ಅರವಿಂದ ಘಟ್ಟಿ, ರಾಜು ತಳವಾರ, ಶ್ರೀಕಾಂತ ತಳವಾರ, ಎಂ.ಆರ್.ಮುನ್ನೋಳಿಕರ, ಅಶೋಕ ಮಾಳಗೆ, ಶಶಿಕಾಂತ ಸಾಳವೆ, ನಂದಕುಮಾರ ದರಬಾರೆ, ಅಶೋಕ ಭಂಡಾರಕರ, ಮುತ್ತು ರಾಯಣ್ಣವರ, ನಿರಂಜನ ಕಾಂಬಳೆ, ರಾಮಚಂದ್ರ ಶಿಪ್ಪುರೆ, ರಾವಸಾಬ್ ಕೀರೆ, ಅಪ್ಪಾಸಾಬ ಬ್ಯಾಳಿ, ಸುದರ್ಶನ ತಮ್ಮನ್ನವರ ಇತರರಿದ್ದರು.