ಶೇಡಬಾಳದ ಎಸ್‌ಎಸ್‌ಎಸ್ ಸಮಿತಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ವೀರೇಶ ಪಾಟೀಲ, ರಶ್ಮಿ ಜಕಾತಿ, ಅಣ್ಣಾಸಾಹೇಬ ಕೋರೆ ಇತರರಿದ್ದರು. 
ಬೆಳಗಾವಿ

ನಿರಂತರ ಅಧ್ಯಯನದಿಂದ ಉತ್ತಮ ಭವಿಷ್ಯ

ಪ್ರಶಾಂತ ಹೂಗಾರ
ಕಾಗವಾಡ: ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳೊಂದಿಗೆ ಓದುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಾಗ್ಮಿ ವೀರೇಶ ಪಾಟೀಲ ಹೇಳಿದರು.
ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳ ಸ್ವಾಗತ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪದವಿಪೂರ್ವ ಮತ್ತು ಪದವಿ ಹಂತದಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರ, ವರ್ತನೆ ಮತ್ತು ಆಲೋಚನೆ ಭವಿಷ್ಯದ ಭದ್ರತೆ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಚೆನ್ನಾಗಿ ಓದಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ರಶ್ಮಿ ಜಕಾತಿ ಮಾತನಾಡಿ, ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಗಣ್ಯರಾದ ಬಿ.ಡಿ.ಬಣಜಿಗವಾಡೆ ಮಾತನಾಡಿದರು. ಉಪತಹಸೀಲ್ದಾರ್ ಅಣ್ಣಾಸಾಹೇಬ ಕೋರೆ, ಸನ್ಮತಿ ಶಿಕ್ಷಣ ಸಹಕಾರ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜಿತ್ ನಾಂದ್ರೆ,
ಸನ್ಮತಿ ವಿದ್ಯಾಯಲದ ಅಧ್ಯಕ್ಷ ಸನ್ಮತಿ ಪಾಟೀಲ, ನಿರ್ದೇಶಕರಾದ ಅಶ್ವತ್ಥ ಪಾಟೀಲ, ರಾಜು ೇನಪ್ಪಗೋಳ, ಕುಮಾರ ಮಾಲಗಾಂವೆ, ಸುನೀತಾ ಮಾಕಣ್ಣವರ, ಅಕ್ಕಾತಾಯಿ ಮುಜಾವರ, ಎಸ್‌ಎಸ್‌ಎಸ್ ಸಮಿತಿ ಶಾಲೆ ಮತ್ತು ಕಾಲೇಜು ಎಕ್ಸಿಕ್ಯೂಟಿವ್ ಕಮಿಟಿ ಅಧ್ಯಕ್ಷ ವಿನೋದ ಪಾಟೀಲ, ಸಿಇಒ ಸತೀಶ ಪಾಟೀಲ, ಅಭಯ ಕಿನಂಗೆ, ಪ್ರಾಚಾರ್ಯ ಬಾಹುಬಲಿ ಬಣಜಿಗವಾಡೆ ಇತರರಿದ್ದರು. ಬಿ.ಎಸ್.ಮಿರಗಿ ನಿರೂಪಿಸಿದರು. ಡಿ.ಕೆ.ಮಾಲಗಾಂವೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಐಶ್ವರ್ಯಾ ಮಾಳಿ ವಂದಿಸಿದರು.