ಕೊಕಟನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರದೀಪ ಭೋಸಲೆ ಸಂವಿಧಾನ ಪೀಠಿಕೆ ಬೋಧಿಸಿದರು. ಸಿದ್ದಪ್ಪ ಮುದಕಣ್ಣವರ, ಅನಿಲ ಮೇಲಿನಕೇರಿ, ರಾಜು ಗಡಕರ, ಮುರೆಪ್ಪ ಬಣಜ, ಕಲ್ಲಪ್ಪ ವೀರಗೌಡ ಇತರರಿದ್ದರು. 
ಬೆಳಗಾವಿ

ಪ್ರಜಾಪ್ರಭುತ್ವ ಸರ್ವಶ್ರೇಷ್ಠ

ಪ್ರಶಾಂತ ಹೂಗಾರ
ಅಥಣಿ ಗ್ರಾಮೀಣ: ಭಾರತ ಪ್ರಜಾಪ್ರಭುತ್ವ ಸರ್ವಶ್ರೇಷ್ಠವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ, ಮುಖಂಡ ಸುಭಾಷ ಸೋನಕರ, ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶ್ಯಾನವ್ವ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಶಿಕ್ಷಕ ಅನಿಲ ಮೇಲಿನಕೇರಿ, ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ, ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ರಾಜು ಗಡಕರ, ಮುರೆಪ್ಪ ಬಣಜ, ಕಲ್ಲಪ್ಪ ವೀರಗೌಡ, ಸುನೀಕುಮಾರ, ಬಾವುಸಾಬ ಭೋಸಲೆ, ಅನಿಲ ಮುಳಿಕ, ಮಲ್ಲಿಕಾರ್ಜುನ ಪರಾಂಡೆ, ಸತೀಶ ಸೋನಕರ, ಪ್ರಕಾಶ ಕಾಂಬಳೆ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಗ್ರಾಪಂ ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಗೂಳಪ್ಪ ಪೂಜಾರಿ, ಅಬ್ದುಲ್ ಹಮೀದ್ ಇತರರಿದ್ದರು. ಸಂಗಪ್ಪ ಕುರುಬರ ಸ್ವಾಗತಿಸಿದರು. ಸಂತೋಷ ತಳಕೇರಿ ನಿರೂಪಿಸಿದರು. ಧರೆಪ್ಪ ನೇಮಗೌಡ ವಂದಿಸಿದರು.