7 ಜನ ಆರೋಪಿ ಪೊಲೀಸರ ವಶಕ್ಕೆ 
ಬೆಳಗಾವಿ

ಮಟ್ಕಾ ಅಡ್ಡೆ ಮೇಲೆ ಪೊಲೀಸ್ ದಾಳಿ

ಬೆಳಗಾವಿ: ನಗರದ ಪೊಲೀಸರು ನಡೆಸಿದ 6 ಪ್ರತ್ಯೇಕ ಮಟ್ಕಾ ಅಡ್ಡೆ ಮೇಲಿನ ದಾಳಿ ಪ್ರಕರಣಗಳಲ್ಲಿ 7 ಜನ ಆರೋಪಿ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿತರಾದ ಮೊಹಮ್ಮದ್‌ಶಫಿ ತಹಶೀಲ್ದಾರ (69), ಐಮಾನ್ ಹಸನ್‌ಸಾಬ್ ಚಿಕ್ಕೋಡಿ (33), ಮೊಹ್ಮದ್‌ದಿಲಶಾದ್ ಅನ್ಸಾರಿ (30), ದಾನೀಶ್ ಸಯ್ಯದ್ (23), ಮೊಹ್ಮದ್‌ರಜಾ ಇನಾಮದಾರ್ (27), ಮೊಹ್ಮದ್‌ಯೂನಸ್ ಕಲೀಲ್‌ಅಹ್ಮದ್ (30), ಸಲ್ಮಾನ್ ಅನ್ಸಾರಿ ನಿಯಾಜುದ್ದೀನ್ (30) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.