ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ.ಎಸ್.ಎಸ್.ಗಡೇದ, ಬಿ.ಡಿ.ನಾಯಿಕವಾಡಿ, ಡಾ.ರಾಜೇಂದ್ರ ಖನದಾಳೆ ಇತರರಿದ್ದರು.
ಚಿಕ್ಕೋಡಿ: ಐದು ವರ್ಷದೊಳಗಿನ ಒಟ್ಟು ೫೨,೪೦೭ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ತಾಲೂಕಿನಾದ್ಯಂತ ೨೯೨ ಬೂತ್ ತೆರೆಯಲಾಗಿದೆ ಎಂದು ಅಪರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಗಡೇದ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ಯಕ್ರಮ ಯಶಸ್ಸಿಗೆ ಒಟ್ಟು ೧,೧೬೪ ಲಸಿಕಾ ಕಾರ್ಯಕರ್ತರನ್ನು ಹಾಗೂ ಮೇಲ್ವಿಚಾರಣೆಗಾಗಿ ೬೪ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.
ತಾಪಂ ಇಒ ಬಿ.ಡಿ.ನಾಯಿಕವಾಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಂದ್ರ ಖನದಾಳೆ, ಮುಖ್ಯ ವೈದ್ಯಾಧಿಕಾರಿ ಡಾ.ಮಹೇಶ ನಾಗರಬೆಟ್ಟ, ಉಪ ತಹಸೀಲ್ದಾರ್ ಪಿ.ಬಿ.ಶೀಲವಂತ, ಸಿಡಿಪಿಒ ಸಂತೋಷ ಕಾಂಬಳೆ, ಡಾ.ರವೀಂದ್ರ ಅಂಟಿನ, ಎನ್.ಆರ್.ಜೋಗಳೆ, ರೋಟರಿ ಕ್ಲಬ್ ಅಧ್ಯಕ್ಷ ಸದಾಶಿವ ತಾರದಾಳೆ, ಅಶೋಕ ಚಾವಟ, ಪಿ.ಬಿ.ಕರನಿಂಗ, ಬಿ.ಎ.ಕುಂಬಾರ ಇತರರಿದ್ದರು.