ಅಳಗವಾಡಿ ಗ್ರಾಮದ ಗ್ರಾಪಂನ ಅರಿವು ಕೇಂದ್ರದ ಗ್ರಂಥಾಲಯದಲ್ಲಿ ಅಗ್ನಿವೀರ ಸೈನಿಕರಾಗಿ ಆಯ್ಕೆಯಾದ 6 ಯುವಕರನ್ನು ಸನ್ಮಾನಿಸಲಾಯಿತು. ಮಹಾದೇವ ಶಿರಗೂರೆ, ಮಾರುತಿ ಪಡಚೆ, ಹನಮಂತ ಗುರವ ಇತರರಿದ್ದರು. 
ಬೆಳಗಾವಿ

ಅಳಗವಾಡಿ ಗ್ರಾಮದ 6 ಯುವಕರು ಅಗ್ನಿವೀರರಾಗಿ ಆಯ್ಕೆ

ಅಳಗವಾಡಿ: ಗ್ರಾಮದ 6 ಜನ ಯುವಕರು ಅಗ್ನಿವೀರರಾಗಿ ಸೈನ್ಯಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಕೆಎಲ್‌ಇ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹನುಮಂತ ಗುರವ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಗ್ರಂಥಾಲಯದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಗ್ರಂಥಾಲಯದಲ್ಲಿ ನಿರಂತರ ಓದಿ ದೇಶ ಕಾಯುವ ಕಾರ್ಯಕ್ಕೆ ಗ್ರಾಮದ 6 ಯುವಕರು ಆಯ್ಕೆಯಾಗಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಪಾಲಕರ ಕೀರ್ತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ಅಗ್ನಿವೀರಾಗಿ ಆಯ್ಕೆಯಾದ ಅರ್ಜುನ ಬನಶಂಕರಿ, ವಿಲಾಸ ಅರಬಾವಿ, ಸಚಿನ ಹೊಸಪೇಟೆ, ಕಿರಣ ಲಠ್ಠೆ, ಅಭಿನಂದನ ಮಾಕಾನೆ, ಸಂತೋಷ ಶಿರಗೂರೆ ಆಯ್ಕೆಯಾದರು.
ಮಾಜಿ ಜಿಪಂ ಸದಸ್ಯ ಮಹಾದೇವ ಶಿರಗೂರೆ, ಕನಕದಾಸ ಪಿಕೆಪಿಎಸ್ ಅಧ್ಯಕ್ಷ ಮಾರುತಿ ಪಡಚೆ, ಶಿವಾನಂದ ಬನಶಂಕರಿ, ಸಂತ್ರಾಮ ಶಿರಗೂರೆ, ದುಂಡಪ್ಪ ಹಾಲಾನಿ, ವಿಶ್ವನಾಥ ಇರಗಾರ, ಕುಮಾರ ಸುತಾರ, ಸದಾಶಿವ ಪತ್ತಾರ, ಸಿದ್ರಾಮ ಬಡಿಗೇರ, ಶಿವು ಕುಂಬಾರ, ಅಮಿತ ಲಗಳಿ, ಶಿವಶಂಕರ ಸುತಾರ ಇತರರಿದ್ದರು.