ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಬಸವರಾಜ ಕಲ್ಲಟ್ಟಿ, ಶಿವನಾಯಿಕ ನಾಯಿಕ, ಅಶೋಕ ಪಟ್ಟಣಶೆಟ್ಟಿ ಇತರರಿದ್ದರು.
ಸಂಕೇಶ್ವರ: ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ 74 ದಿನಗಳಲ್ಲಿ 4,48,516 ಮೆ.ಟನ್ ಕಬ್ಬು ನುರಿಸಿ 4,66,200 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿದೆ. ಶೇ.12.58 ಇಳುವರಿ ಜತೆಗೆ 20 ಲಕ್ಷ ಲೀ. ಸ್ಪಿರಿಟ್ ಉತ್ಪಾದಿಸಿದೆ ಎಂದು ಕಾರ್ಖಾನೆ ಹಿರಿಯ ಸಂಚಾಲಕ ಶಿವನಾಯಿಕ ನಾಯಿಕ ಹೇಳಿದರು.
ಇಲ್ಲಿನ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಖಾನೆ ನೌಕರರ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಶಿವಪುತ್ರಪ್ಪ ಶಿರಕೋಳಿ, ಸುರೇಶ ಬೆಲ್ಲದ, ಪ್ರಭುದೇವ ಪಾಟೀಲ, ಬಸಪ್ಪ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಸುರೇಶ ರಾಯಮಾನೆ, ಅಶೋಕ ಚಂದಪ್ಪಗೋಳ, ಶಾರದಾ ಪಾಟೀಲ, ಭಾರತಿ ಹಂಜಿ, ವ್ಯವಸ್ಥಾಪಕ ನಿರ್ದೇಶಕ ವೀರನಗೌಡ ದೇಸಾಯಿ, ಕಾರ್ಯಾಲಯ ಅಧೀಕ್ಷಕ ಪ್ರಭಾಕರ ಡಬ್ಬನ್ನವರ, ಕಾರ್ಖಾನೆ ಅಧಿಕಾರಿಗಳು ಇತರರಿದ್ದರು.