ಬೆಳಗಾವಿ: ಆಡಳಿತಾತ್ಮಕ ಹಿತದೃಷ್ಟಿಯಿಂದ ಜನಸಂಖ್ಯೆ, ವಿಸ್ತೀರ್ಣ, ಭೂ ಆದಾಯ ಮತ್ತು ಸಾರ್ವಜನಿಕರಿಂದ ಬಂದಿರುವ ಬೇಡಿಕೆ ಪರಿಗಣಿಸಿ, ಸವದತ್ತಿ ತಾಲೂಕಿನ ಮುರಗೋಡ ಹೋಬಳಿಯ 35 ಗ್ರಾಮಗಳನ್ನು ಬೈಲಹೊಂಗಲ ತಾಲೂಕು ವ್ಯಾಪ್ತಿಗೆ ಸೇರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸವದತ್ತಿ ತಾಲೂಕಿನ ಮುರಗೋಡ, ಸುಬ್ಬಾಪುರ, ರಾಮಾಪುರ, ಶಿವನಗರ (ರಾಮಾಪುರ ತಾಂಡಾ), ಬಸರಗಿ ಕೆ.ಎಂ., ಚಚಡಿ, ಗುಂಡ್ಲೂರು, ಹಾರುಗೊಪ್ಪ, ಗೊಂಟಮಾರ, ತಡಸಲೂರ, ಹಲಕಿ, ಹಲಕಿ ತಾಂಡಾ, ಹೂಲಿಕೇರಿ ತಾಂಡಾ, ಜಂಗಮಬುದಗಟ್ಟಿ, ಹಿರೇಬುದನೂರು, ಚಿಕ್ಕಬುದನೂರು, ಮಳಗಲಿ, ಕುತ್ರನಟ್ಟಿ , ಒಬಳದಿನ್ನಿ, ಇಂಚಲ, ಮುತವಾಡ, ಮರಕುಂಬಿ, ಚಿಕ್ಕೊಪ್ಪ ಕೆ.ಎಂ., ಹಿರೇಕೊಪ್ಪ ಕೆ.ಎಂ., ಹೊಸೂರು, ಮಲ್ಲೂರು, ಮಾಟೋಳ್ಳಿ, ಸೊಗಲ, ಇಂಗಳಗಿ, ಕಗಿಹಾಳ, ಕಗಿಹಾಳ ತಾಂಡಾ, ರುದ್ರಾಪುರ, ಗಿರಿನಗರ, ಕಾರಿಮನಿ, ದುಂಡನಕೊಪ್ಪ ಹಳ್ಳಿಗಳು ಬೈಲಹೊಂಗಲ ತಾಲೂಕಿಗೆ ಸೇರ್ಪಡೆಯಾಗಿವೆ. ಬೈಲಹೊಂಗಲ ಸಮೀಪವಿದ್ದರೂ ಈ ಗ್ರಾಮಸ್ಥರು ದೂರದ ಸವದತ್ತಿಗೆ ಹೋಗಬೇಕಿತ್ತು. ಶಾಸಕ ಮಹಾಂತೇಶ ಕೌಜಲಗಿ ಪ್ರಯತ್ನದಿಂದ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.