ಬೆಳ್ಳಿ ಕಿರೀಟ ಕಳವು 
ಬೆಳಗಾವಿ

3.22 ಕೆಜಿ ತೂಕದ ಬೆಳ್ಳಿ ಕಿರೀಟ ಕಳವು

ಧರ್ಮರಾಜ ರಾಮನಗೌಡ ಪಾಟೀಲ
ಖಾನಾಪುರ: ತಾಲೂಕಿನ ಚಾಪಗಾಂವನ ಶ್ರೀ ಪೊಂಡೇಶ್ವರ ದೇವಸ್ಥಾನದಲ್ಲಿ ಎರಡು ಬೆಳ್ಳಿ ಕಿರೀಟ ಕಳ್ಳತನವಾದ ಘಟನೆ ಈಚೆಗೆ ನಡೆದಿದೆ. 9.5 ಲಕ್ಷ ರೂ. ಮೌಲ್ಯದ 3.22 ಕೆಜಿ ಕಿರೀಟವನ್ನು ದೇವಸ್ಥಾನದ ಮುಂದಿನ ಬಾಗಿಲಿನ ಬೀಗ ಮುರಿದು, ಕಿಟಕಿ ಮೂಲಕ ಪ್ರವೇಶಿಸಿ ಕದ್ದುಕೊಂಡು ಹೋಗಿದ್ದಾರೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್‌ಸ್ಪೆಕ್ಟರ್ ಧರ್ಮಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಳಗಾವಿ ವರದಿ: ಮುತಗಾ ಗ್ರಾಮದ ಬಳಿ ಬೆಳಗಾವಿ-ಬಾಗಲಕೋಟೆ ರಸ್ತೆ ಬದಿ ಮದ್ಯ ಸೇವನೆ ಮಾಡುತ್ತಿದ್ದ ಸ್ಥಳೀಯ ಭರತ ಮುತಗೇಕರ (29) ವಿರುದ್ಧ ಮಾರಿಹಾಳ ಪೊಲೀಸರು ಪ್ರಕರಣದ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚಿಕ್ಕೋಡಿ ತಾಲೂಕಿನ ನನದಿ ಗ್ರಾಮದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯಕ್ಸಂಬಾದ ಸುಭಾಷ ಬುಬನಾಳೆ (42) ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ. ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.