ರಾಯಬಾಗ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್‌ನಲ್ಲಿ ದಂಪತಿ ಒಂದಾದರು. ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ, ಜಿ.ಎಸ್.ಪವಾರ, ವಿ.ಎಸ್.ಪೂಜಾರಿ, ಐ.ಎನ್.ಕೋಷ್ಠಿ ಇತರರಿದ್ದರು.
ರಾಯಬಾಗ: ಕಕ್ಷಿದಾರರು ರಾಜಿ ಸಂಧಾನ ಮೂಲಕ ವ್ಯಾಜ್ಯ ಪರಿಹರಿಸಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.
ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿ, ಒಟ್ಟು 2,484 ವಿವಿಧ ಪ್ರಕರಣ ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ. ಬೇರೆಯಾಗಿದ್ದ ಜೋಡಿ ಒಂದು ಮಾಡಲಾಗಿದೆ ಎಂದರು.
ವಕೀಲರಾದ ಜಿ.ಎಸ್. ಪವಾರ, ವಿ.ಎಸ್.ಪೂಜಾರಿ, ಐ.ಎನ್.ಕೋಷ್ಠಿ, ಎಲ್.ಎಚ್. ನಾಗರಮುನ್ನೋಳ್ಳಿ, ಶ್ರೀದೇವಿ ನಾಯಿಕ, ಪಿ.ಎಸ್.ಕುರಬೆಟ್ಟ, ಕೇಶವ ಬಸ್ತವಾಡೆ, ಶಿವಲಿಂಗ ಬಾಗೇವಾಡಿ, ಸರ್ವೆಶ ತಗ್ಗಿಹಾಳ ಇತರರಿದ್ದರು