ಬೆಳಗಾವಿ:ಮೂರು ರಾಜ್ಯಗಳ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಸಾಲು ಸಾಲು ರಜೆ, ಹೊಸ ವಾರ್ಷಚರಣೆ ಹಿನ್ನೆಲೆ ಡಿಸೆಂಬರ್ ಒಂದೇ ತಿಂಗಳಲ್ಲಿ ಬರೋಬ್ಬರಿ 14.61 ಲಕ್ಷ ಲೀಟರ್ ಮದ್ಯ , 70 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 1.20 ಲಕ್ಷ ಮದ್ಯ ಮಾರಾಟ ಹೆಚ್ಚಳವಾಗಿದೆ.
ಹೌದು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 645 ಮದ್ಯ ಅಂಗಡಿಗಳ ವ್ಯಾಪ್ತಿಯಲ್ಲಿ ಡಿ.31ರಂದು ಬೆಳಗ್ಗೆ 8 ರಿಂದ ರಾತ್ರಿ 12 ಗಂಟೆ ನಡುವಿನ ಅವಧಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಹೊಸ ವರ್ಷಾಚರಣೆಯು ಮೂರು ದಿನಗಳ ಮೊದಲೇ ಹೆಚ್ಚುವರಿಯಾಗಿ 13 ಸಾವಿರ ಬಾಕ್ಸ್‌ಗಳ ಮದ್ಯದ ಮಾರಾಟವಾಗಿದೆ. ಬೆಳಗಾವಿ ಮಹಾನಗರ, ಪಟ್ಟಣ ಪ್ರದೇಶಗಳನ್ನು ಹೊರತು ಹೊರತು ಪಡಿಸಿ ಗೋಕಾಕ, ಚಿಕ್ಕೋಡಿ, ಸವದತ್ತಿ, ರಾಮದುರ್ಗ, ಅಥಣಿ, ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಮದ್ಯ ಹೆಚ್ಚಿಗೆ ಮಾರಾಟವಾಗಿದೆ.
ನಗರ, ಗ್ರಾಮೀಣ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವರ್ಷದ ಕೊನೆಯ ದಿನ (ಡಿ.31)ನ ಅಂದಾಜು 35,450 ಬಾಕ್ಸ್ ( 3,19,050 ಲೀಟರ್) ಮದ್ಯ ಮತ್ತು ಬಿಯರ್ ಮಾರಾಟವಾಗಿದೆ. ಸಾಮಾನ್ಯ ದಿನಗಳಲ್ಲಿ 10 ರಿಂದ 12 ಸಾವಿರ ಬಾಕ್ಸ್‌ಗಳ ಮದ್ಯ ಮಾರಾಟ ಆಗುತಿತ್ತು. ಡಿಸೆಂಬರ್ ತಿಂಗಳಿನಲ್ಲಿ ಅಷ್ಟೇ ಬರೋಬ್ಬರಿ 1,62,344 ಮದ್ಯ ಹಾಗೂ 70,865 ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಅಂದರೆ ಡಿಸಂಬರ್ ತಿಂಗಳಿನಲ್ಲಿ 1,54,819 ಮದ್ಯ ಹಾಗೂ 75,904 ಬಿಯರ್ ಬಾಕ್ಸ್‌ಗಳು ಮಾರಾಟವಾಗಿಗಿತ್ತು. ಮದ್ಯದಲ್ಲಿ 15 ಸಾವಿರ ಬಾಕ್ಸ್ ಹೆಚ್ಚಳ ಮಾರಾಟವಾಗಿದ್ದರೆ, ಬಿಯರ್‌ನಲ್ಲಿ 5ಸಾವಿರ ಬಾಕ್ಸ್ ಮಾರಾಟ ಕಡಿಮೆಯಾಗಿದೆ. ಮದ್ಯ, ಬಿಯರ್ ದರ ಹೆಚ್ಚಳದಿಂದಾಗಿ ಆದಾಯ ಪ್ರಮಾಣ ಶೇ.22ರಷ್ಟು ಹೆಚ್ಚಳವಾಗಿದೆ.
ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಮದ್ಯ ಮಾರಾಟ ಮತ್ತು ಕುಡಿಯುವರ ಪ್ರಮಾಣ ಹೆಚ್ಚಳವಾಗಿದೆ. ಮದ್ಯ, ಬಿಯರ್ ದರ ಹೆಚ್ಚಳವಾಗಿದೆ. ಗೋವಾ ಅಕ್ರಮ ಮದ್ಯ, ರಕ್ಷಣಾ ಇಲಾಖೆ ಮದ್ಯ ಮಾರಾಟ ಪ್ರಮಾಣ ಹೆಚ್ಚಿದ್ದರಿಂದ ಆದಾಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಸರ್ಕಾರಿ ರಜೆ ದಿನಗಳಲ್ಲಿ ನಗರ ಪ್ರದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚಾದರೆ ಗ್ರಾಮೀಣ ಭಾಗದಲ್ಲಿ ಸಾಮಾನ್ಯ ದಿನಗಳಲ್ಲಿಯೂ ಮದ್ಯ ಸೇವಿಸುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಟೇಟ್ರಾ ಪ್ಯಾಕ್ ಮದ್ಯ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
.........................
ಡಿಸೆಂಬರ್ ತಿಂಗಳಲ್ಲಿ ಮಾರಾಟದ ವಿವರ
.........................................................
ವರ್ಷದ ಕೊನೆ ಡಿಸೆಂಬರ್ ತಿಂಗಳಲ್ಲಿ ಮದ್ಯ ಮಾರಾಟ ಪ್ರಮಾಣದಲ್ಲಿ ಏರಿಕೆ ಮತ್ತು ಬಿಯರ್ ಮಾರಾಟದಲ್ಲಿ ಇಳಿಕೆ ಕಂಡಿದೆ. ಈ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಮದ್ಯ ಸೇಲ್ ಪ್ರಮಾಣ ಹೆಚ್ಚಳವಾಗಿದೆ.
-- ಫಕೀರಪ್ಪ ಚಲವಾದಿ, ಜಂಟಿ ಆಯುಕ್ತ, ಅಭಕಾರಿ ಇಲಾಖೆ, ಬೆಳಗಾವಿ ವಿಭಾಗ