ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸ್ವಾತಂತ್ರೃ ದಿನ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರನ್ನು ಸಚಿವ ಸತೀಶ ಜಾರಕಿಹೊಳಿ ಸನ್ಮಾನಿಸಿ ಗೌರವಿಸಿದರು. ಆಸೀಫ್ ಸೇಠ್, ಮೊಹಮ್ಮದ ರೋಷನ್, ರಾಹುಲ ಶಿಂಧೆ,ಸುನೀಲ ಹನಮನ್ನವರ ಇತರರಿದ್ದರು. 
ಬೆಳಗಾವಿ

ರೈತರಿಗೆ 2198 ಕೋಟಿ ಬೆಳೆ ಸಾಲ ವಿತರಣೆ

ಬೆಳಗಾವಿ :

ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 2026 ಜುಲೈ ಅಂತ್ಯಕ್ಕೆ 2,198 ಕೋಟಿ ಬೆಳೆ ಸಾಲ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 80ನೇ ಸ್ವಾ ತಂತ್ರ ದಿನ ಧ್ವಜಾರೋಹಣ ನೆರವೇರಿಸಿದ ಬಳಿಕ ಸಾರ್ವಜನಿಕ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಸಹಕಾರ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ ರೈತರಿಗೆ 2025-26 ನೇ ಸಾಲಿನಲ್ಲಿ 4.86 ಲಕ್ಷ ರೈತರಿಗೆ 3,827 ಕೋಟಿ ಬೆಳೆ ಸಾಲ ವಿತರಿಸಲಾಗಿದೆ . 2026-27ನೇ ಸಾಲಿನಲ್ಲಿ ಜುಲೈ ಅಂತ್ಯಕ್ಕೆ 2.96 ಲಕ್ಷ ರೈತರಿಗೆ 2,198 ಕೋಟಿ ರೂ.ಬೆಳೆ ಸಾಲ ವಿತರಿಸಲಾಗಿದೆ.
ಪ್ರಸಕ್ತ ಜಿಲ್ಲೆಯಲ್ಲಿ 6495 ವಿವಿಧ ರೀತಿಯ ಸಹಕಾರ ಸಂಘಗಳು ಹಾಗೂ 1224 ಸೌಹಾರ್ದ ಸಹಕಾರಿಗಳು ಕೆಲಸ ನಿರ್ವಹಿಸುತ್ತಿವೆ. ಶೇಕಡಾ 3 ರ ಬಡ್ಡಿ ದರದಲ್ಲಿರೂ. 10 ಲಕ್ಷಗಳ ವರೆಗೆ ಕೃಷಿ ಚಟುವಟಿಕೆಗಳನ್ನು ಕೈಕೊಳ್ಳಲು ವಧ್ಯಮಾವಧಿ ಸಾಲವನ್ನು ಕೇಂದ್ರ ಸಹಕಾರ ಬ್ಯಾಂಕ್, ಪಿಕಾರ್ಡ ಬ್ಯಾಂಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ವಿತರಿಸಲಾಗುತ್ತಿದೆ. 2025-26 ನೇ ಸಾಲಿನಲ್ಲಿ 702 ರೈತರಿಗೆ 29.48 ಕೋಟಿ ರೂ.ಮಧ್ಯಮಾವಧಿ ಸಾಲ ವಿತರಿಸಲಾಗಿದೆ. ಜುಲೈ ಅಂತ್ಯಕ್ಕೆ 174 ರೈತರಿಗೆ 11.75 ಕೋಟಿ ರೂ.ಮಧ್ಯಮಾವಧಿಸಾಲ ವಿತರಿಸಲಾಗಿದೆ.
ಪ್ರಸಕ್ತ ಹಂಗಾಮಿನಲ್ಲಿ ಮೇ ಹಾಗೂ ಜೂನ್‌ನಲ್ಲಿ ಜಿಲ್ಲೆಯಾದ್ಯಂತ ಮಳೆ ಕೊರತೆ ಉಂಟಾಗಿರುವುದರಿಂದ ಮುಂಗಾರು ಬಿತ್ತನೆ ಪ್ರಾರಂಭವಾಗಲು ಸ್ವಲ್ಪ ಹಿನ್ನಡೆಯಾಗಿದ್ದರೂ ಜುಲೈನಲ್ಲಿ ಬಂದಂತಹ ಉತ್ತಮ ಮಳೆಯಿಂದ ರೈತರಿಗೆ ಅನುಕೂಲಕರವಾಗಿ ಬಿತ್ತನೆ ಕಾರ್ಯ ಚುರುಕುಗೊಂಡಿರುತ್ತದೆ. ಜಿಲ್ಲೆಯಲ್ಲಿ 7.52 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 7.16 ಲಕ್ಷ ಹೆಕ್ಟೇರ್ ರಷ್ಟು ಬಿತ್ತನೆಯಾಗಿದೆ.ಬಿತ್ತನೆಗೆ ಅಗತ್ಯವಿರುವ 2,87,390 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಪೂರೈಕೆಯಾಗಿದ್ದು, ಇಲ್ಲಿಯವರೆಗೆ ಸುಮಾರು 1,52,776 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಪೂರೈಕೆ ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾಧಿಕಾರಿ ನೂತನ ಕಟ್ಟಡ ನಿರ್ಮಾಣಕ್ಕಾಗಿ 55 ಕೋಟಿ ರೂ.ಕಂದಾಯ ಇಲಾಖೆಯಿಂದ ಹಾಗೂ 20 ಕೋಟಿ ಲೋಕೋಪಯೋಗಿ ಇಲಾಖೆಯಿಂದ ಸೇರಿ ಒಟ್ಟು 75 ಕೋಟಿಗೆ ಡಿ.ಪಿ.ಆರ್ ತಯಾರಿಸಿ ಟಿ.ಎ. ಇ.ಆರ್.ಸಿ. ಅನುಮೋದನೆ ಹಾಗೂ ಆಡಳಿತಾತ್ಮಕ ಅನುಮೋದನೆ ನೀಡಲಾಯಿದೆ. 10 ಕೋಟಿ ರೂ. ಅನುದಾನದಲ್ಲಿ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಪ್ರಗತಿ ಹಂತದಲ್ಲಿದೆ. ನಗರದ ಸಂಕಮ ಹೋಟೆಲ್ ನಿಂದ ಅಶೋಕ ವೃತ್ತದ ಸಂಗೊಳ್ಳಿ ರಾಯಣ್ಣ ವೃತ್ತದ ಮುಖಾಂತರ ರಾಣಿ ಚೆನ್ನಮ್ಮ ವೃತ್ತದವರೆಗೆ ಫ್ಲೈ-ಓವರ್ ನಿರ್ಮಾಣಕ್ಕಾಗಿ 275.53 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಇದೇ ಸಂದರ್ಭದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕ ಆಸೀಫ್ ಸೇಠ್, ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಸುನೀಲ ಹನಮನ್ನವರ,ಡಿಸಿ ಮೊಹಮ್ಮದ ರೋಷನ್, ಸಿಇಒ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಎಸ್‌ಪಿ ಕೆ.ರಾಮರಾಜನ್, ಡಿಸಿಪಿ ನಾರಾಯಣ ಭರಮಣಿ ಇತರರಿದ್ದರು.
............................
ಬಾಕ್ಸ್
42.96 ಕೋಟಿ ರೂ. ಪ್ರೋತ್ಸಾಹಧನ
ರಾಜ್ಯ ಸರ್ಕಾರವು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ ಸಂಘಗಳಿಗೆ ಹಾಲು ಪೂರೈಕೆ ಮಾಡುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ.ಪ್ರೋತ್ಸಾಹಧನ ನೀಡಲಾಗುತ್ತಿದೆ. 2025-26 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 32 ಸಾವಿರ ರೈತ ಸದಸ್ಯರಿಂದ 8.9 ಕೋಟಿ ಲೀಟರ್ ಹಾಲು ಸಂಗ್ರಹಿಸಿ 42.96 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. 2026-27ನೇ ಸಾಲಿನ ಜುಲೈ ಅಂತ್ಯಕ್ಕೆ 32 ಸಾವಿರ ರೈತರಿಗೆ 10.85 ಕೋಟಿ ರೂ. ಪ್ರೋತ್ಸಾಹದನ ನೀಡಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
.......................