ಕಣ್ಣಿನ ಶಿಬಿರ 
ಬೆಳಗಾವಿ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ

ಬೆಳಗಾವಿ: ನಗರದಲ್ಲಿರುವ ಡಾ.ಪಟವರ್ಧನ್ ಅವರ ನಂದಾದೀಪ ಕಣ್ಣಿನ ಆಸ್ಪತ್ರೆ ವತಿಯಿಂದ ನಗರ ನಿವಾಸಿಗಳಿಗಾಗಿ ಬೃಹತ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಅಭಿಯಾನ ಆಯೋಜಿಸಲಾಗಿತ್ತು.
ಅತ್ಯಾಧುನಿಕ ಉಪಕರಣ, ಉನ್ನತ ಮಟ್ಟದ ಆರೈಕೆ, ಸೇವೆ ಹಾಗೂ ಅನುಭವಿ, ನುರಿತ ನೇತ್ರ ಶಸ್ತ್ರಚಿಕಿತ್ಸಕರ ಪರಿಣತಿಯೊಂದಿಗೆ ನಡೆಸಲಾದ ಅಭಿಯಾನದಲ್ಲಿ 200ಕ್ಕೂ ಹೆಚ್ಚು ರೋಗಿಗಳು ಪ್ರಯೋಜನ ಪಡೆದರು.
ಉತ್ತಮ ದೃಷ್ಟಿ ಫಲಿತಾಂಶ ಖಚಿತಪಡಿಸಿಕೊಳ್ಳಲು ಗುಣಮಟ್ಟದ ಇಂಟ್ರಾಓಕ್ಯುಲರ್ ಲೆನ್ಸ್‌ಗಳನ್ನು ಬಳಸಲಾಗಿದೆ.
ಎಐ ಆಧಾರಿತ ರೋಬಾಟಿಕ್ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳ ಲಭ್ಯತೆ ಬಳಸಿಕೊಂಡು, ಎಲ್ಲ ಶಸ್ತ್ರಚಿಕಿತ್ಸೆಗಳನ್ನು ಹೊಲಿಗೆರಹಿತ ಮತ್ತು ನೋವುರಹಿತವಾಗಿ ಮಾಡಿರುವುದು ವಿಶೇಷ. ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಗುಣಮುಖರಾಗುವ ಅವಧಿ ಗಣನೀಯವಾಗಿ ಕಡಿಮೆಯಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳು ಡಿಸ್ಚಾರ್ಜ್ ಆಗಿ ಮನೆ ಸೇರಿದರು.