ಬೆಳಗಾವಿ ರಾಮತೀರ್ಥನಗರದಲ್ಲಿ ಮಂಗಳವಾರ ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿದರು. ಹನಮಂತ ಕೊಂಗಾಲಿ, ಮುರೇಂದ್ರಗೌಡ ಪಾಟೀಲ, ಎನ್.ಬಿ.ನಿರ್ವಾಣಿ, ಸುರೇಶ ಯಾದವ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನಗರದಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆ ಅತಿಕ್ರಮಣ ಮಾಡಿಕೊಳ್ಳಲು ಸಹಕರಿಸಿರುವ ಬುಡಾ ಆಯುಕ್ತರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಂಗಳವಾರ ರಾಮತೀರ್ಥ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
ರಾಮತೀರ್ಥನಗರದಲ್ಲಿ ಸರ್ವೆ ನಂ 561 ಮತ್ತು 562 ಸಿಎ ನಿವೇಶನದಲ್ಲಿ ಎಸ್‌ಟಿಪಿ ಪ್ಲಾಂಟ್ ಸ್ಥಾಪನೆಗೆ 20 ಗುಂಟೆ ಮೀಸಲಿಡಲಾಗಿತ್ತು. ಆದರೆ, ಅಲ್ಪಸಂಖ್ಯಾತ ಇಲಾಖೆ ಹಾಸ್ಟೇಲ್ ಅಧಿಕಾರಿಗಳು ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಈ ಕುರಿತು ದೂರು ನೀಡಿದ್ದರು ಬುಡಾ ಅಧಿಕಾರಿಗಳು ಕ್ರಮ ವಹಿಸುವ ಬದಲು ಅತಿಕ್ರಮಣಕ್ಕೆ ಸಹಕಾರ ನೀಡಿದ್ದಾರೆ. ಇದೇ ರೀತಿಯ ಸಿಎ ನಿವೇಶನ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಬುಡಾ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳು, ಇಂಜಿನಿಯರ್‌ಗಳು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟದ 20 ಗುಂಟೆ ಜಾಗ ಅತಿಕ್ರಮಣಕ್ಕೆ ಸಹಕಾರ ನೀಡಿದ್ದಾರೆ. ಈ ಕುರಿತು ಎಲ್ಲ ಮಾಹಿತಿ ಲಭ್ಯವಿದ್ದರು ಅತಿಕ್ರಮಣದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಲೋಕಾಯುಕ್ತ ತನಿಖೆ ಹಾಗೂ ಯುಡಿಡಿಎಂಎ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಆಯುಕ್ತ ಸೇರಿ ಎಲ್ಲರ ವಿರುದ್ಧ ಕಠಿಣ ಆಗಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಬಿಜೆಪಿ ಮುಖಂಡ ಮುರೇಂದ್ರಗೌಡ ಪಾಟೀಲ, ಮಾಜಿ ಮೇಯರ್ ಎನ್.ಬಿ.ನಿರ್ವಾಣಿ, ಸುರೇಶ ಯಾದವ ಇತರರಿದ್ದರು.
ರಾಮತೀರ್ಥನಗರದಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆ ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು. ತಪ್ಪಿತಸ್ಥರ ಬುಡಾ ಆಯುಕ್ತ ಸೇರಿ ಅಧಿಕಾರಿ, ಇಂಜಿನಿಯರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಮತ್ತು ಲೋಕಾಯುಕ್ತ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಲಾಗಿದೆ.